ಲೀಸ್ ನಿಯಮ ಉಲ್ಲಂಘಿಸಿದ ಶಾಲೆಗೆ ಸೀಲ್; ಶಿಕ್ಷಣ ಇಲಾಖೆ ವಿರುದ್ಧ ಪ್ರತಿಭಟನೆ - Protest in Mysore
ಮೈಸೂರು: ಶಾಲಾ ಆಡಳಿತದ ಮಂಡಳಿ ಲೀಜ್(Lease) ಅಗ್ರಿಮೆಂಟ್ ನಿಯಮ ಉಲ್ಲಂಘಿಸಿದ್ದಾರೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ನಗರದ ದಾವೂದ್ ಖಾನ್ ರಸ್ತೆಯಲ್ಲಿರುವ ಫಾರೂಖಿಯ ಶಾಲೆಯನ್ನು ಸೀಲ್ ಮಾಡಿತ್ತು. ಹೈಕೋರ್ಟ್ ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕಳೆದ ಎರಡು ದಿನಗಳ ಹಿಂದೆ ಇಲಾಖೆಯ ಉಪ ನಿರ್ದೇಶಕರು ಕ್ರಮ ಕೈಗೊಂಡಿದ್ದರು. ಇದನ್ನು ವಿರೋಧಿಸಿ ಸೋಮವಾರ ಶಾಲೆಯ ಆಡಳಿತ ಮಂಡಳಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಕೆಲ ಸಂಘಟನೆಯ ಕಾರ್ಯಕರ್ತರು ಶಾಲೆಯ ಮುಂಭಾಗದ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
Last Updated : Feb 3, 2023, 8:24 PM IST