ಧಾರವಾಡ: ಮಳೆರಾಯನ ಕೃಪೆಗಾಗಿ ಗೊಂಬೆಗಳ ಮದುವೆ ನೆರವೇರಿಸಿದ ರೈತರು.. - ಮಳೆರಾಯನ ಕೃಪೆಗಾಗಿ ಗೊಂಬೆಗಳ ಮದುವೆ
ಧಾರವಾಡ:ಜಿಲ್ಲೆಯಲ್ಲಿ ಮುಂಗಾರು ಮಳೆ ವಿಳಂಬ ಹಿನ್ನೆಲೆಯಲ್ಲಿ ಗೊಂಬೆಗಳ ಮದುವೆ ಮಾಡಲಾಗುತ್ತಿದೆ. ಮೊನ್ನೆ ತಾನೇ ಜಿಲ್ಲೆಯ ನವಲಗುಂದ ತಾಲೂಕಿನ ಕಾಲವಾಡ ಗ್ರಾಮದಲ್ಲಿ ಗೊಂಬೆಗಳ ವಿವಾಹ ಮಾಡಲಾಗಿತ್ತು. ಅದೇ ರೀತಿ ತಾಲೂಕಿನ ಗುಮ್ಮಗೋಳ ಗ್ರಾಮದಲ್ಲಿ ಮಳೆರಾಯನ ಆಗಮನಕ್ಕಾಗಿ ಗೊಂಬೆಗಳ ಮದುವೆ ಕಾರ್ಯಕ್ರಮ ಆಯೋಜಿಸಲಾಯಿತು.
ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮಸ್ಥರು, ಸವದತ್ತಿ ಯಲ್ಲಮ್ಮನ ಸನ್ನಿಧಿಯಿಂದ ಪವಿತ್ರವಾದ ನೀರನ್ನು ತಂದು ಗ್ರಾಮದ ದೇವಸ್ಥಾನಕ್ಕೆ ಸಿಂಪಡಿಸಿಲಾಯಿತು. 15 ಜನ ಮುತ್ತೈದೆಯರನ್ನು ಕರೆಸಿ ಗೊಂಬೆಗಳ ವಿವಾಹ ನೆರವೇರಿಸಲಾಯಿತು. ಈಗಾಗಲೇ ಮುಂಗಾರು ಮಳೆ ಆರಂಭವಾಗಬೇಕಿತ್ತು. ಮಳೆರಾಯನ ಕೃಪೆಗಾಗಿ ಗೊಂಬೆಗಳ ಮದುವೆ ನೆರವೇರಿಸಲಾಯಿತು.
ಹಿಂದಿನಿಂದಲೂ ಹಿರಿಯರ ನಡೆಸಿಕೊಂಡು ಬಂದಿರುವ ಸಂಪ್ರದಾಯದಂತೆ ಗೊಂಬೆಗಳ ಮದುವೆ ಮಾಡಿದರೆ ಮಳೆಯಾಗುತ್ತೆ ಎಂಬುದು ಇಲ್ಲಿನ ಗ್ರಾಮಸ್ಥರ ಗಾಢವಾದ ನಂಬಿಕೆಯಾಗಿದೆ. ಮಳೆ ಕೊರತೆಯಾದರೆ, ಸಂಪ್ರದಾಯಂತೆ ಜನರು ಈ ರೀತಿಯಾಗಿ ಧಾರ್ಮಿಕ ಆಚರಣೆ ಮಾಡುತ್ತಾರೆ. ಸದ್ಯ ಕೈಕೊಟ್ಟ ಮುಂಗಾರು ಮಳೆಯಿಂದ ಅನ್ನದಾತರು ಮುಗಿಲು ನೋಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತಾಪಿ ವರ್ಗ ಕಂಗಾಲಾಗಿದೆ. ಗ್ರಾಮಸ್ಥರು ತಾವೇ ಸ್ವತಃ ಹಣ ಸಂಗ್ರಹಣೆ ಮಾಡಿಕೊಂಡು ಮದುವೆ ಮಾಡಿ ಅನ್ನ ಸಂತರ್ಪಣೆಯನ್ನು ಏರ್ಪಡಿಸಿದ್ದರು.
ಇದನ್ನೂ ಓದಿ:ಉಚಿತ ವಿದ್ಯುತ್ ಗ್ಯಾರಂಟಿ ಬರೆ ಮಧ್ಯೆ ಎಸ್ಕಾಂಗಳಿಗೆ ವಿದ್ಯುತ್ ಖರೀದಿ ಹೊರೆ