ರಾಯಚೂರು: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಜೆಸ್ಕಾಂ ಕಚೇರಿ ಮುಂದೆ ರೈತರ ಪ್ರತಿಭಟನೆ
Published : Oct 17, 2023, 10:47 PM IST
ರಾಯಚೂರು: ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ನಗರದ ಬಸವೇಶ್ವರ ವೃತ್ತದ ಬಳಿ ಇರುವ ಜೆಸ್ಕಾಂ ಕಚೇರಿಯ ಮುಂಭಾಗ ರಸ್ತೆ ತಡೆ, ತಟ್ಡೆ (ಪೇಲ್ಟ್), ರಾಸಾಯನಿಕ ವಸ್ತು ಪ್ರದರ್ಶನ ಮಾಡಿ, ಕರೆಂಟ್ ನೀಡಿ, ಇಲ್ಲವೇ ವಿಷ ಕೊಡಿ ಎಂದು ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಬರಗಾಲ ಆವರಿಸಿ ಈಗಾಗಲೇ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ಮಧ್ಯೆ ಪಂಪ್‌ಸೆಟ್ ಅಳವಡಿಸಿಕೊಂಡು ವ್ಯವಸಾಯ ಮಾಡುವ ರೈತರು ವಿದ್ಯುತ್ ಅವಲಂಬಿಸಿ ಬಿತ್ತನೆ ಮಾಡಿದ್ದಾರೆ. ಈಗ ಬೆಳೆ ಬೆಳೆಯುತ್ತಿದ್ದು, ನೀರಿಲ್ಲದೆ ಕಮರಿ ಹೋಗುತ್ತಿದೆ. ಜೆಸ್ಕಾಂ ಸಮರ್ಪಕವಾಗಿ ವಿದ್ಯುತ್ ಒದಗಿಸುತ್ತಿಲ್ಲ. ಇದರಿಂದ ಬೆಳೆ ಬೆಳೆ ಒಣಗಿ ರೈತರು ವಿಷ ಕುಡಿಯುವ ಪರಿಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು.
ಪ್ರತಿಭಟನೆಯಲ್ಲಿ ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಬೆಂಬಲಿ ಭಾಗಿಯಾಗಿ, ರೈತರಿಗೆ ವಿದ್ಯುತ್ ಪೂರೈಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿ, ಸರ್ಕಾರಕ್ಕೂ ಒತ್ತಾಯ ಮಾಡಿದರು.
ಇನ್ನೊಂದೆಡೆ, ಪ್ರತಿಭಟನೆಯಿಂದಾಗಿ ಸಂಚಾರಕ್ಕೆ ಅಡ್ಡಿಯಾಗಿ ವಾಹನ ಸವಾರರು, ಸಾರ್ವಜನಿಕರು ಪರದಾಡಿದರು. ರೋಗಿಯನ್ನು ಕರೆದುಕೊಂಡ ಹೋಗುತ್ತಿದ್ದ ಅಂಬ್ಯುಲೆನ್ಸ್ಗೆ ಪ್ರತಿಭಟನೆಯ ಬಿಸಿ ತಟ್ಟಿ, ಸಂಚಾರದ ನಡುವೆ ಸಿಲುಕಿಕೊಂಡಿತ್ತು. ಇದನ್ನು ಕಂಡ ಪ್ರತಿಭಟನಾನಿರತ ರೈತರು ಅಂಬ್ಯುಲೆನ್ಸ್ ಹೋಗಲು ಅವಕಾಶ ಮಾಡಿಕೊಟ್ಟರು. ಇದೇ ವೇಳೆ ಬೇರೆ ವಾಹನಗಳನ್ನು ಹೋಗದಂತೆ ತಡೆದು ನಂತರ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದರು.
ಇದನ್ನೂ ಓದಿ:ತುಂಗಭದ್ರಾ ಎಡದಂಡೆಯ ಕೊನೆ ಭಾಗದ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ರೈತರ ಪ್ರತಿಭಟನೆ