ಸೂರ್ಯಕಾಂತಿಗೆ ಎಂಎಸ್ಎಸ್ಪಿ ನೀಡಲು ಒಪ್ಪಿದ ಸರ್ಕಾರ, ರೈತರ ಪ್ರತಿಭಟನೆ ಮುಕ್ತಾಯ: ವಿಡಿಯೋ - Farmers protest end
ಕುರುಕ್ಷೇತ್ರ(ಹರಿಯಾಣ):ಸೂರ್ಯಕಾಂತಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಹರಿಯಾಣದ ಕುರುಕ್ಷೇತ್ರದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಮುಕ್ತಾಯವಾಗಿದೆ. ರೈತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿದ ನಂತರ ಅನ್ನದಾತರು ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಿದರು. ಆ ಬಳಿಕ ಎಲ್ಲರೂ ಸಂಭ್ರಮಾಚರಣೆ ನಡೆಸಿದರು.
ಇದಕ್ಕೂ ಮೊದಲು ರೈತರು ತೀವ್ರ ಸ್ವರೂಪದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಸೂರ್ಯಕಾಂತಿ ಬೆಳೆ ಖರೀದಿಯಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಿಗದಿರುವುದನ್ನು ವಿರೋಧಿಸಿ ಹರಿಯಾಣದ ರೈತರು ಜೂನ್ 11 ರಂದು ದೆಹಲಿಯ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ್ದರು.
ಹರ್ಯಾಣ, ಪಂಜಾಬ್, ಉತ್ತರ ಪ್ರದೇಶ ಮತ್ತು ಇತರ ನೆರೆಯ ರಾಜ್ಯಗಳ ರೈತ ಮುಖಂಡರು ತಮ್ಮ ಬೇಡಿಕೆಯನ್ನು ಒತ್ತಿಹೇಳಲು 'ಎಂಎಸ್‌ಪಿ ದಿಲಾವೋ, ಕಿಸಾನ್ ಬಚಾವೋ' ಮಹಾಪಂಚಾಯತ್‌ಗಾಗಿ ಪಿಪ್ಲಿ ಧಾನ್ಯ ಮಾರುಕಟ್ಟೆಯಲ್ಲಿ ಜಮಾಯಿಸಿದ್ದರು.
ರಾಜ್ಯ ಸರ್ಕಾರವು ಈ ವರ್ಷದ ಆರಂಭದಲ್ಲಿ ಸೂರ್ಯಕಾಂತಿ ಬೆಳೆಯನ್ನು ಬಿಬಿವೈ ಅಡಿ ಸೇರಿಸುವುದಾಗಿ ಘೋಷಿಸಿತ್ತು. ಈ ಯೋಜನೆಯ ಮೂಲಕ ಎಂಎಸ್‌ಪಿಗಿಂತ ಕಡಿಮೆ ಮಾರಾಟವಾದ ಉತ್ಪನ್ನಗಳ ವಿರುದ್ಧ ರೈತರಿಗೆ ನಿಗದಿತ ಪರಿಹಾರವನ್ನು ಪಾವತಿಸುತ್ತದೆ. ರಾಜ್ಯ ಸರ್ಕಾರವು ಎಂಎಸ್‌ಪಿಗಿಂತ ಕಡಿಮೆ ಮಾರಾಟವಾಗುವ ಸೂರ್ಯಕಾಂತಿ ಬೆಳೆಗೆ ಯೋಜನೆಯಡಿ ಮಧ್ಯಂತರ ಬೆಂಬಲವಾಗಿ ಪ್ರತಿ ಕ್ವಿಂಟಲ್‌ಗೆ 1,000 ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರ ಸೂರ್ಯಕಾಂತಿಯನ್ನು ಪ್ರತಿ ಕ್ವಿಂಟಲ್‌ಗೆ 6,400 ರೂಪಾಯಿ ಎಂಎಸ್‌ಪಿ ದರದಲ್ಲಿ ಖರೀದಿಸಬೇಕು ಎಂದು ರೈತರು ಒತ್ತಾಯಿಸಿದ್ದರು.
ಇದನ್ನೂ ಓದಿ:ವಾಹನ ಸಂಚಾರ ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿ ಆರೋಪ: ಸಿಎಂ - ಡಿಸಿಎಂ ಸೇರಿ 36 ಮಂದಿಗೆ ಸಮನ್ಸ್