ಲೋಡ್ ಶೆಡ್ಡಿಂಗ್ ಎಫೆಕ್ಟ್ : ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ರಾತ್ರಿ ಹೊಲಕ್ಕೆ ನೀರುಣಿಸುತ್ತಿರುವ ರೈತರು - farmers facing Load shedding problems
Published : Oct 18, 2023, 9:03 AM IST
ಕೊಪ್ಪಳ : ಈ ಹಿಂದೆ ರೈತರ ಪಂಪ್ಸೆಟ್ಗಳಿಗೆ ಪ್ರತಿನಿತ್ಯ 7 ಗಂಟೆ ವಿದ್ಯುತ್ ನೀಡಲಾಗುತ್ತಿತ್ತು. ಆದರೆ, ಇದೀಗ ರಾಜ್ಯ ಸರ್ಕಾರ ಲೋಡ್ ಶೆಡ್ಡಿಂಗ್ ನೆಪದಲ್ಲಿ ಐದು ಗಂಟೆಗೆ ಇಳಿಸಿದ ಪರಿಣಾಮ ಅನ್ನದಾತರು ರಾತ್ರಿಯಿಡಿ ಕರೆಂಟ್ಗಾಗಿ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಗಲಿನಲ್ಲಿ ವಿದ್ಯುತ್ ನೀಡಲು ಆಗ್ರಹ : ಕೊಪ್ಪಳ ಜಿಲ್ಲೆಯಾದ್ಯಂತ ಸದ್ಯಕ್ಕೆ 66,100 ಐಪಿ ಸೆಟ್ಟುಗಳಿವೆ. ವಿವಿಧ ಬೆಳೆ ಬೆಳೆಯುತ್ತಿರುವ ಸುಮಾರು 22 ಸಾವಿರ ರೈತರು ನಿತ್ಯ ಮಧ್ಯರಾತ್ರಿಯಿಂದ ಬೆಳಗಿನವರೆಗೂ ನಿದ್ದೆಗೆಡಬೇಕಾಗಿದೆ. ಅಪ್ಪಿತಪ್ಪಿ ರಾತ್ರಿ 12 ಗಂಟೆಗೆ ಹೊಲಕ್ಕೆ ಹೋಗಿ ನೀರುಣಿಸದಿದ್ದರೆ ಬೆಳೆದಿರುವ ಬೆಳೆ ಒಣಗಿ ಹೋಗುತ್ತದೆ. ಹೀಗಾಗಿ, ರಾತ್ರಿ ವೇಳೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ವಿದ್ಯುತ್ಗಾಗಿ ಕಾಯುವ ಅನಿವಾರ್ಯತೆ ರೈತರಿಗೆ ಒದಗಿ ಬಂದಿದೆ. ಇನ್ನೊಂದೆಡೆ, ರಾತ್ರಿ ಐದು ಗಂಟೆ ನೀಡುವ ಕರೆಂಟ್ ಅನ್ನು ಹಗಲು ಹೊತ್ತಿನಲ್ಲಿ ನೀಡಿ ಎಂಬುದು ರೈತರ ಆಗ್ರಹವಾಗಿದೆ.
ಪ್ರಸ್ತುತ ರಾಜ್ಯದಲ್ಲಿ ವಿದ್ಯುತ್ ಕ್ಷಾಮ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇದನ್ನು ನಿಯಂತ್ರಿಸಲು ಖಾಸಗಿಯವರು ಉತ್ಪಾದಿಸುವ ವಿದ್ಯುತ್ಅನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡದಂತೆ ತಡೆಯಲು ವಿದ್ಯುಚ್ಛಕ್ತಿ ಕಾಯ್ದೆ ಸೆಕ್ಷನ್11 ಅನ್ನು ಅಸ್ತ್ರವಾಗಿ ಬಳಸಿದೆ.
ಇದನ್ನೂ ಓದಿ :ಲೋಡ್ ಶೆಡ್ಡಿಂಗ್ ಟೀಕಿಸುವ ಬಿಜೆಪಿ ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿಸಿತ್ತು? : ಡಿ. ಕೆ. ಶಿವಕುಮಾರ್