ಸೇವಂತಿಗೆ ಹೂವಿನ ದರ ಕುಸಿತ: ಬೇಸತ್ತು ಟ್ರ್ಯಾಕ್ಟರ್ನಿಂದ ಬೆಳೆ ನಾಶ ಮಾಡಿದ ಅನ್ನದಾತ - etv bharat kannada
Published : Sep 25, 2023, 10:49 PM IST
ಮಂಡ್ಯ: ಸೇವಂತಿಗೆ ಹೂವಿನ ದರ ಕುಸಿತದಿಂದ ಮನನೊಂದ ರೈತನೊಬ್ಬ ತಾನು ಬೆಳೆದ ಹೂವಿನ ಬೆಳೆಯನ್ನು ನಾಶ ಮಾಡಿರುವ ಘಟನೆ ಪಾಂಡವಪುರ ತಾಲೂಕಿನ ಕಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ರೈತ ಯೋಗರಾಜ್ ಎಂಬುವರು ತಮ್ಮ ಜಮೀನಿನಲ್ಲಿ ಬೆಳೆದ ಸೇವಂತಿಗೆಯನ್ನು ನಾಶ ಮಾಡಿದ್ದಾರೆ.
ರೈತ ಯೋಗರಾಜ್ ಮಾತನಾಡಿ, 2 ರೂ. ಗೆ ಒಂದರಂತೆ ಸೇವಂತಿಗೆ ಸಸಿಗಳನ್ನು ತೆಗೆದುಕೊಂಡುಬಂದು ಜಮೀನಿನಲ್ಲಿ ನೆಟ್ಟು, ಕೆಲಸಗಾರರಿಗೆ ಕೂಲಿ ಕೊಟ್ಟು, ಕಷ್ಟಪಟ್ಟು ಬೆಳೆದಿದ್ದರಿಂದ ಉತ್ತಮ ಸೇವಂತಿಗೆ ಫಸಲು ಬಂದಿದೆ. ಈಗ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಸೇವಂತಿಗೆ ಹೂವಿನ ದರ 10 ರಿಂದ 15 ರೂ. ಆಗಿದೆ. ಈ ಹಿಂದೆ ಕೆಜಿಗೆ 150 ರಿಂದ 160 ರೂ. ಬೆಲೆ ಸಿಗುತ್ತಿತ್ತು. ಅದು ಕೆಲಸಗಾರರಿಗೆ ಕೂಲಿ, ಇತರೆ ಖರ್ಚಿಗೆ ಸರಿಹೋಗುತ್ತಿತ್ತು. ಈಗ ನಮ್ಮ ಕೈಯಿಂದಲೇ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೂವು ಕೊಯ್ಯುವ ಕೆಲಸಗಾರರಿಗೆ 300 ರೂ. ಕೂಲಿ ಕೊಡುತ್ತೇವೆ. ಈಗ ಒಂದು ಬ್ಯಾಗ್ ಸೇವಂತಿಗೆ ಹೂವಿಗೆ 100 ರಿಂದ 150 ರೂ. ಬೆಲೆ ಇದೆ. ಹೂವು ಬೆಳೆಗಾರರು ತುಂಬಾ ನಷ್ಟ ಅನುಭವಿಸಿದ್ದು, ಸರ್ಕಾರ ಈ ಬಗ್ಗೆ ಗಮನ ಹರಿಸಿ ಪರಿಹಾರ ಕೊಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:ಹಾಳಾದ ಬೆಳೆಯನ್ನು ಕೈಯಲ್ಲಿಡಿದು ಅನ್ನದಾತರ ಪ್ರತಿಭಟನೆ: ಸಮಸ್ಯೆ ಆಲಿಸಿದ ಬೆಳಗಾವಿ ಜಿಲ್ಲಾಧಿಕಾರಿ