ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರ ಧರಣಿ.. 99 ದಿನಗಳ ಬಳಿಕ ಉಗ್ರರೂಪ ಪಡೆದ ಅನ್ನದಾತರ ಪ್ರತಿಭಟನೆ! - ಚೂರುನಲ್ಲಿ ರೈತರು ಮತ್ತು ಪೊಲೀಸರ ಮಧ್ಯ ವಾಗ್ವಾದ
ಚುರು (ರಾಜಸ್ಥಾನ): ವಿಮೆ, ಬೆಳೆ ಕಟಾವು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ವತಿಯಿಂದ ಕಳೆದ 99 ದಿನಗಳಿಂದ ತಾರಾನಗರದಲ್ಲಿ ಧರಣಿ ಸತ್ಯಾಗ್ರಹ ನಡೆಯುತ್ತಿದೆ. ಈ ಪ್ರತಿಭಟನೆ ಈಗ ಉಗ್ರ ರೂಪ ಪಡೆದಿದೆ. ಮಹಾಪಾದವ್ ಅಡಿ ಬುಧವಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ಬೃಹತ್ ಸಾರ್ವಜನಿಕ ಸಭೆ ಏರ್ಪಡಿಸಲಾಗಿತ್ತು. ರೈತರ ಬೇಡಿಕೆಗಳ ಕುರಿತು ಆಡಳಿತ ಮಂಡಳಿಯೊಂದಿಗೂ ಮಾತುಕತೆ ನಡೆಸಿದರು. ಮಾತುಕತೆ ವಿಫಲವಾದ ನಂತರ ರೈತರು ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಪ್ರತಿಭಟನೆ ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗಿದರು. ಬಳಿಕ ಮೆರವಣಿಗೆ ಎಸ್‌ಡಿಎಂ ಕಚೇರಿಗೆ ತಲುಪಿತು. ಇಲ್ಲಿ ರೈತರು ಬಲವಂತವಾಗಿ ಎಸ್‌ಡಿಎಂ ಕಚೇರಿಗೆ ಪ್ರವೇಶಿಸಲು ಪ್ರಯತ್ನಿಸಿದ್ದರು. ಈ ವೇಳೆ ಪೊಲೀಸರು ಮತ್ತು ರೈತರ ಮಧ್ಯೆ ಮಾತಿನ ಜಟಾಪಟಿ ನಡೆಯಿತು. ರೈತರು ಎಸ್‌ಡಿಎಂ ಕಚೇರಿಗೆ ನುಗ್ಗಲು ಹರಸಾಹಸ ಪಟ್ಟರು. ಪೊಲೀಸರು ರೈತರನ್ನು ತಡೆದ ಕಾರಣ ಎಸ್‌ಡಿಎಂ ಕಚೇರಿ ಪ್ರವೇಶಿಸಲು ಸಾಧ್ಯವಾಗಲಿಲ್ಲ. ನಂತರ ರೈತರು ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆಯಿತು. ರೈತರು ದೆಹಲಿ - ಬಿಕಾನೇರ್ ಹೆದ್ದಾರಿಯನ್ನು ಜಾಮ್ ಮಾಡುವ ಮೂಲಕ SDM ಕಚೇರಿಯ ಮುಂದೆ ಧರಣಿ ಆರಂಭಿಸಿದರು.
Last Updated : Feb 3, 2023, 8:23 PM IST