ಕೊಪ್ಪಳದಲ್ಲಿ ಮೆಕ್ಕೆಜೋಳ ನಾಶಪಡಿಸಿದ ರೈತ; ಬರ ಘೋಷಣೆಗೆ ಆಗ್ರಹ- ವಿಡಿಯೋ - ಕೊಪ್ಪಳ
Published : Sep 8, 2023, 1:49 PM IST
ಕೊಪ್ಪಳ:ಬಿತ್ತನೆ ಮಾಡಿ 2 ತಿಂಗಳಾಗಿದೆ, ಸಂಪೂರ್ಣ ಮಳೆಯಾಗದ ಹಿನ್ನೆಲೆಯಲ್ಲಿ ಬೆಳೆ ಕಾಳು ಕಟ್ಟುತ್ತಿಲ್ಲ. ಈಗಿರುವ ಬೆಳೆಯಿಂದ ಒಂದು ಹಿಡಿ ಕಾಳು ಸಹ ಬರುವುದಿಲ್ಲ. ಈ ಪರಿಸ್ಥಿತಿಯಿಂದ ಬೇಸತ್ತ ರೈತರು ತಮ್ಮ ಹೊಲದಲ್ಲಿ ಬೆಳೆದಿರುವ ಬೆಳೆ ನಾಶ ಮಾಡುತ್ತಿದ್ದಾರೆ. ಈ ಮೂಲಕ ಕೊಪ್ಪಳ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಆಗ್ರಹಿಸುತ್ತಿದ್ದಾರೆ.
ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ರೈತ ವಿನೋದ ಎಂಬವರು 8 ಎಕರೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಬಿತ್ತನೆ ಮಾಡಿ 70-80 ದಿನವಾಗಿದೆ. ಇನ್ನೊಂದು ತಿಂಗಳಲ್ಲಿ ಕಟಾವು ಹಂತಕ್ಕೆ ಬರಬೇಕಿತ್ತು. ಆದರೆ ಕಾಳು ಕಟ್ಟಿಲ್ಲ. ಅವಧಿ ಮೀರಿದ್ದರಿಂದ ರೈತ ಟ್ರ್ಯಾಕ್ಟರ್ ಮೂಲಕ ತನ್ನ ಬೆಳೆಯನ್ನು ನಾಶ ಮಾಡುತ್ತಿದ್ದಾನೆ. ಪ್ರತಿ ಎಕರೆಗೆ 20 ಸಾವಿರಕ್ಕಿಂತ ಅಧಿಕ ಖರ್ಚು ಮಾಡಿರುವ ರೈತನಿಗೆ ಈಗ ಭೂಮಿಯಲ್ಲಿ ಒಂದು ರೂಪಾಯಿಯೂ ಆದಾಯ ಬರುವುದಿಲ್ಲ ಎಂಬುದು ಖಾತರಿಯಾಗಿದೆ. ಹಾಗಾಗಿ ಮೆಕ್ಕೆಜೋಳ ನಾಶಪಡಿಸಿದ್ದಾನೆ.
ಬರ ಘೋಷಣೆಗೆ ಟ್ವೀಟ್ ಮೂಲಕ ಆಗ್ರಹ:ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಈಗಾಗಲೇ ಸಾಕಷ್ಟು ರೈತರು ಬೆಳೆಯನ್ನು ನಾಶ ಮಾಡಿದ್ದಾರೆ. ರಾಜ್ಯ ಸರಕಾರ ಕೊಪ್ಪಳ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು. ಬೆಟಗೇರಿಯ ರೈತ ಏಳುಕೊಟೇಶ ಕೋಮಲಾಪುರ ಕೊಪ್ಪಳ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಹಾವೇರಿಯಲ್ಲಿ ಬಾರದ ಮಳೆ: ಬೆಳೆ ನಾಶ... ರಾಸುಗಳ ಮಾರಾಟ... ಹೇಳತೀರದು ಅನ್ನದಾತನ ಸಂಕಷ್ಟ