ಹಾವೇರಿ: ಮೆಕ್ಕೆಜೋಳಕ್ಕೆ ಲದ್ದಿ ಹುಳು ಕಾಟ; ಬೆಳೆ ನಾಶಪಡಿಸಿದ ರೈತ - ಕರ್ಜಗಿ ಗ್ರಾಮ
ಹಾವೇರಿ:ಜಿಲ್ಲೆಯ ವಿವಿಧೆಡೆ ಬೆಳೆದ ಮೆಕ್ಕೆಜೋಳಕ್ಕೆ ಲದ್ದಿ ಹುಳು ಸೇರಿದಂತೆ ವಿವಿಧ ರೋಗಗಳು ಬಾಧಿಸುತ್ತಿವೆ. ಇದರಿಂದ ಹತಾಶರಾದ ಕೆಲ ರೈತರು ರೋಗಬಾಧಿತ ಬೆಳೆ ನಾಶಪಡಿಸುತ್ತಿದ್ದಾರೆ. ಗೋವಿನ ಜೋಳದ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ರೈತರೊಬ್ಬರು 10 ಎಕರೆಯಲ್ಲಿದ್ದ ಬೆಳೆ ನಾಶಪಡಿಸಿದ್ದಾರೆ. ನಾಗಪ್ಪ ಗೊಬ್ಬರಗುಂಪಿ ಎಂಬವರು ಟ್ರ್ಯಾಕ್ಟರ್ನಿಂದ ರೂಟರ್ ಹೊಡೆದು ಬೆಳೆ ನಾಶಪಡಿಸಿದರು. ಇವರು ಅಂದಾಜು ಒಂದುವರೆ ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆಗೆ ಲದ್ದಿರೋಗ, ಕೊಳೆ ರೋಗ ಕಾಣಿಸಿಕೊಂಡಿತ್ತು.
ಇನ್ನೊಂದೆಡೆ, ಸವಣೂರು ತಾಲೂಕು ತೊಂಡೂರು ಗ್ರಾಮದ ರೈತ ಸುಬ್ಬಣ್ಣ ದೊಡ್ಡಮನಿ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆ ನಾಶಪಡಿಸಿದ್ದಾರೆ. ನಾಲ್ಕು ಎಕರೆ ಜಮೀನನ್ನು ಇನ್ನೊಬ್ಬರಿಂದ ಲಾವಣಿ ಹಾಕಿಕೊಂಡಿದ್ದ ಸುಬ್ಬಣ್ಣ 70 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದರಂತೆ. ರೋಗ ಕಾಣಿಸಿಕೊಂಡಿದ್ದು ರೈತ ಕುಂಟಿ ಗಳೆಗಳಿಂದ ಮೆಕ್ಕೆಜೋಳ ಬೆಳೆಯನ್ನು ಹರಗಿ ನಾಶ ಮಾಡಿದ್ದಾರೆ.
ಇದನ್ನೂ ಓದಿ:ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕೇರಳದ ನಾಲ್ವರು ಆರೋಪಿಗಳು ಅರೆಸ್ಟ್