'ನನ್ನ ಜ್ವಾಳ ಹೋತೋ, ಲಕ್ಷಗಟ್ಟಲೆ ಖರ್ಚು ಮಾಡಿದ ಬೆಳೆ ಹೋತೋ..' ರೈತನ ವೇದನೆ - ಬೆಳೆ ಹಾನಿಗೆ ರೈತ ಕಣ್ಣೀರು
ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಅವಧಿಗೂ ಮುನ್ನವೇ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಹಿನ್ನೀರಿನ ರೈತರಿಗೆ ಸಂಕಷ್ಟ ಎದುರಾಗಿದೆ. ಕೊಪ್ಪಳ ತಾಲೂಕಿನ ತಿಗರಿಗ್ರಾಮದ ರೈತ ಮಂಜುನಾಥ ಎಂಬುವವರ ಮೆಕ್ಕೆಜೋಳದ ಹೊಲಕ್ಕೆ ನೀರು ನುಗ್ಗಿದ್ದು ಅಪಾರ ಹಾನಿ ಉಂಟಾಗಿದೆ. ಹಾನಿಗೊಳಗಾದ ಹೊಲ ಕಂಡು ರೈತ ಬಾಯಿ ಬಾಯಿ ಬಡಿದುಕೊಂಡು ಗೋಳಾಡಿದ್ದಾನೆ. 70 ಲಕ್ಷ ರೂಪಾಯಿ ಆದಾಯ ತರುಬಹುದಾಗಿದ್ದ ಮೆಕ್ಕೆ ಜೋಳ ಬೆಳೆಯಲು ಈಗಾಗಲೇ 20 ಲಕ್ಷ ರೂಪಾಯಿ ಖರ್ಚು ಮಾಡಿದ್ದೆ. ಮಳೆಯಿಂದಾಗಿ ಬೆಳೆ ಹಾಳಾಗಿ ಹೋಯಿತು. ಗಂಗಮ್ಮ ಬೆಳೆ ಹಾಳು ಮಾಡ್ಯಾಳ, ಯಾರಾದರೂ ನೋಡ್ರೋ ಯಪ್ಪಾ ಎಂದು ಗೋಳಾಡಿದ ರೈತನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Last Updated : Feb 3, 2023, 8:23 PM IST