ಪುನೀತ್ ಭಾವಚಿತ್ರ ನೀಡಿ ಯೋಧನಿಗೆ ಆತ್ಮೀಯ ಬೀಳ್ಕೊಡುಗೆ ನೀಡಿದ ಗ್ರಾಮಸ್ಥರು - hassan soldier farewell news
ಹಾವೇರಿ: ದೀಪಾವಳಿ ರಜೆಗೆ ಬಂದು ಕರ್ತವ್ಯಕ್ಕೆ ಮರಳುತ್ತಿರುವ ಯೋಧನಿಗೆ ಗ್ರಾಮಸ್ಥರು ಅರ್ಥಪೂರ್ಣ ಬೀಳ್ಕೊಡುಗೆ ನೀಡಿದರು. ಈ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಗ್ರಾಮದಲ್ಲಿ ನಡೆಯಿತು. ಗಿರೀಶ್ ಕಡೇರ್ ಕಳೆದ ಹಲವು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಜಮ್ಮು ಕಾಶ್ಮೀರ ಗಡಿಯಲ್ಲಿ ಸೇವೆಗೆ ನಿಯೋಜನೆಗೊಂಡಿದ್ದಾರೆ. ದೀಪಾವಳಿ ರಜೆಗಾಗಿ ಗ್ರಾಮಕ್ಕೆ ಆಗಮಿಸಿದ್ದರು. ಇದೀಗ ರಜೆ ಮುಗಿದಿದ್ದು ಮರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಭಾವಚಿತ್ರ ನೀಡುವ ಮೂಲಕ ಅವರನ್ನು ಆತ್ಮೀಯವಾಗಿ ಬೀಳ್ಕೊಟ್ಟರು. ಗ್ರಾಮಸ್ಥರ ಹಾರೈಕೆಗೆ ಸಂತಸ ವ್ಯಕ್ತಪಡಿಸಿದ ಸೈನಿಕ, ಧನ್ಯವಾದ ಸಲ್ಲಿಸಿದರು.
Last Updated : Feb 3, 2023, 8:31 PM IST