ಭಾರತ್ ಜೋಡೋ ಯಾತ್ರೆ.. ಬಳ್ಳಾರಿಯಲ್ಲಿ ಡಿಕೆಶಿಗೆ ಅಭಿಮಾನಿಗಳಿಂದ ಸೇಬಿನ ಹಾರ - fruits wreath to dk shivakumar
ಬಳ್ಳಾರಿ: ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಹಾಗೂ ಪರಿಶೀಲನೆಗೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಗರಕ್ಕೆ ಆಗಮಿಸಿದ್ದಾರೆ. ನಗರದ ಸುಧಾ ಕ್ರಾಸ್ನಲ್ಲಿ ಡಿಕೆಶಿ ಅವರಿಗೆ ಅಭಿಮಾನಿಗಳು ಕ್ರೇನ್ ಮೂಲಕ ಸೇಬಿನ ಹಾರ ಹಾಕಿ ಸ್ವಾಗತಿಸಿದರು. 200 ಕೆ.ಜಿ.ಗೂ ಹೆಚ್ಚು ಭಾರದ ಸೇಬಿನ ಹಾರವನ್ನು ಹಾಕಿದ ನಂತರ, ಹಣ್ಣನ್ನು ಪಡೆಯಲು ತಳ್ಳಾಟ, ನೂಕಾಟ ನಡೆಯಿತು. ಇದರಿಂದಾಗಿ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತವಾಗಿ ಟ್ರಾಫಿಕ್ ಜಾಮ್ ಉಂಟಾಯಿತು. ನಂತರ ಪೊಲೀಸರು ಟ್ರಾಫಿಕ್ ಜಾಮ್ ತೆರವು ಮಾಡಿದರು.
Last Updated : Feb 3, 2023, 8:27 PM IST