ನಟ ತಾರಕರತ್ನ ಚೇತರಿಕೆಗೆ 101 ತೆಂಗಿನಕಾಯಿ ಒಡೆದ ಅಭಿಮಾನಿಗಳು - etv bharat kannada
ಆನೇಕಲ್:ರಾಜಕೀಯ ಪ್ರಚಾರದ ಸಂದರ್ಭದಲ್ಲಿ ಹೃದಯ ಸ್ತಂಭನ ಉಂಟಾಗಿ ಕಳೆದ 10 ದಿನಗಳಿಂದ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ನಟ ನಂದಮೂರಿ ತಾರಕರತ್ನ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಅವರ ಅಭಿಮಾನಿಗಳು ಆಸ್ಪತ್ರೆಯ ಎದುರಿನ ಗಣಪತಿ ದೇವಸ್ಥಾನದಲ್ಲಿ ಸೇರಿ ಶೀಘ್ರ ಚೇತರಿಕೆಗೆ ಹಾರೈಸಿ 101 ತೆಂಗಿನಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿದರು. ಅಭಿಮಾನಿ ಶಿವಮೂರ್ತಿ ಮಾತನಾಡಿ, "ಆಸ್ಪತ್ರೆಯಲ್ಲಿ ತಾರಕರತ್ನ ಸ್ವಲ್ಪ ಚೇತರಿಸಿಕೊಂಡಿದ್ದಾರೆ. ಆದಷ್ಟು ಬೇಗ ಅವರು ಸಂಪೂರ್ಣ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ:ಅಪ್ಪು ಸಮಾಧಿ ಬಳಿ ಸರ್ಕಾರ ಸ್ಮಾರಕ ನಿರ್ಮಿಸಲಿದೆ: ಸಿಎಂ ಬೊಮ್ಮಾಯಿ