ವಿಡಿಯೋ: ಕ್ಯಾಂಟೀನ್‍ಗೆ ಅಪ್ಪು ಹೆಸರು ಮರುನಾಮಕರಣ ಮಾಡಿದ ಅಭಿಮಾನಿ - ಪುನೀತ್ ರಾಜ್‍ಕುಮಾರ್ ಅಭಿಮಾ
ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಅಭಿಮಾನಿಗಳನ್ನು ಅಗಲಿ ಒಂದು ವರ್ಷವಾಗಿದೆ. ಕಾಫಿನಾಡಲ್ಲಿ ಅಭಿಮಾನಿಯೊಬ್ಬರು ತಮ್ಮ ಕ್ಯಾಂಟೀನ್‍ಗೆ ಅಪ್ಪು ಕ್ಯಾಂಟೀನ್ ಎಂದು ಮರುನಾಮಕರಣ ಮಾಡಿ ಪೂಜೆ ಸಲ್ಲಿಸಿ ಭಾವುಕರಾದರು. ಚಿಕ್ಕಮಗಳೂರು ನಗರದ ಶ್ರೀಲೇಖಾ ಥಿಯೇಟರ್ ಮುಂಭಾಗ ಕ್ಯಾಂಟೀನ್ ಮೂಲಕ ಬದುಕು ಸಾಗಿಸುತ್ತಿರುವ ರವಿ ಎಂಬುವರು ಚಿಕ್ಕಂದಿನಿಂದಲೂ ಅಪ್ಪು ಅಭಿಮಾನಿ. ನಟನ ನಿಧನದ ಬಳಿಕವೂ ಅವರ ಕುಟುಂಬಕ್ಕೆ ಒಳ್ಳೆಯದಾಗಲಿ, ಅಪ್ಪು ಆತ್ಮಕ್ಕೆ ಶಾಂತಿ ಸಿಗಲೆಂದು ಐತಿಹಾಸಿಕ ದೇವೀರಮ್ಮನ ಬೆಟ್ಟ ಹತ್ತಿ ಬೇಡಿಕೊಂಡಿದ್ದರು. ಈ ವರ್ಷವೂ ಬೆಟ್ಟ ಹತ್ತಿ ಅಪ್ಪು ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದಾರೆ.
Last Updated : Feb 3, 2023, 8:30 PM IST