ಕರ್ನಾಟಕ

karnataka

ಟಗರು ಕೊಡಲು ಮುಂದಾದ ಸಿದ್ದರಾಮಯ್ಯ ಅಭಿಮಾನಿ

ETV Bharat / videos

ಟಗರು ಕೊಡಲು ಮುಂದಾದ ಸಿದ್ದರಾಮಯ್ಯ ಅಭಿಮಾನಿ: ವಿಡಿಯೋ - ಸಿದ್ದರಾಮಯ್ಯ ಕಟ್ಟಾ ಅಭಿಮಾನಿ ಮಾದೇಗೌಡ

By

Published : May 18, 2023, 10:55 PM IST

ಮೈಸೂರು : ಸಿದ್ದರಾಮಯ್ಯ ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಆಯ್ಕೆಯಾದರೆ, ಅವರಿಗೆ ಬನ್ನೂರು ಟಗರುಗಳನ್ನ ಕೊಡುಗೆಯಾಗಿ ಕೊಡಲು ಅವರ ಅಭಿಮಾನಿ ಹರಕೆ ಹೊತ್ತಿದ್ದರಂತೆ. ಅದರಂತೆ ಸಿದ್ದರಾಮಯ್ಯ ಇಂದು ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ, ಅವರು ತವರಿಗೆ ಬಂದಾಗ ಈ ಬನ್ನೂರು ಟಗರುಗಳನ್ನ ಕೊಡಲು ನಿರ್ಧರಿಸಿದ್ದಾರೆ. 

ವರುಣಾ ಕ್ಷೇತ್ರದ ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿ ಮಾದೇಗೌಡ ಎಂಬುವವರು ಈ ಬಾರಿ ಸಿದ್ದರಾಮಯ್ಯ ವರುಣಾದಿಂದ ಗೆದ್ದು ಮುಖ್ಯಮಂತ್ರಿ ಆದರೆ, ಅವರಿಗೆ ಎರಡು ಬನ್ನೂರು ಟಗರುಗಳನ್ನ ಕೊಡುವುದಾಗಿ ಕಳೆದ ಒಂದು ತಿಂಗಳ ಹಿಂದೆ ಹರಕೆ ಹೊತ್ತಿದ್ದರು.

ವರುಣಾ ಕ್ಷೇತ್ರದ ಕಡವೆಕಟ್ಟೆ ಹುಂಡಿ ಗ್ರಾಮದ ಸಿದ್ದರಾಮಯ್ಯ ಕಟ್ಟಾ ಅಭಿಮಾನಿ ಮಾದೇಗೌಡ ಎಂಬುವವರು ಇಂದು ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿ ಆಯ್ಕೆ ಘೋಷಣೆ ಆಗುತ್ತಿದ್ದಂತೆ ಸಂತಸ ವ್ಯಕ್ತಪಡಿಸಿದ್ದಾರೆ. ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಬಂದ ಸಂದರ್ಭದಲ್ಲಿ ಅವರಿಗೆ ಈ ವಿಶೇಷ ಟಗರುಗಳನ್ನ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ:ಕೇವಲ 20 ನಿಮಿಷಕ್ಕೆ ಮುಗಿದ ಸಭೆ: ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಆಯ್ಕೆ

ABOUT THE AUTHOR

...view details