ಚಿತ್ರಮಂದಿರಕ್ಕೆ ಬೆಂಕಿ ಬಿದ್ದ ಸುಳ್ಳು ವದಂತಿ: ಥಿಯೇಟರ್‌ನಿಂದ ಹೊರ ಬಂದ ಪ್ರೇಕ್ಷಕರು
ದಾವಣಗೆರೆ :ಚಿತ್ರಮಂದಿರಕ್ಕೆ ಬೆಂಕಿ ಬಿದ್ದಿದೆ ಎಂಬ ಸುಳ್ಳು ವದಂತಿಗೆ ಕಿವಿಕೊಟ್ಟ ಸಿನಿಮಾ ಪ್ರೇಕ್ಷಕರು ಥಿಯೇಟರ್‌ನಿಂದ ಹೊರ ಓಡಿ ಬಂದಿರುವ ಘಟನೆ ದಾವಣಗೆರೆ ನಗರದ ತ್ರಿನೇತ್ರಾ ಚಿತ್ರಮಂದಿರದಲ್ಲಿ ಗುರುವಾರ ತಡರಾತ್ರಿ ನಡೆದಿದೆ. ನೂರಾರು ಜನರು ಚಿತ್ರ ಮಂದಿರದೆದುದು ಜಮಾಯಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳ ಸಿಬ್ಬಂದಿ ಆಗಮಿಸಿದ್ದರು. ಪರಿಶೀಲನೆ ನಡೆಸಿದಾಗ ಇದೊಂದು ಸುಳ್ಳು ವದಂತಿ ಎಂದು ಗೊತ್ತಾಗಿದೆ. ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದಾರೆ. ಪರಿಶೀಲನೆ ವೇಳೆ ಯಾವುದೇ ಅವಘಡ ಆಗಿದ್ದು ಗೊತ್ತಾಗಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿ ಅವಿನಾಶ ಮಾಹಿತಿ ನೀಡಿದರು.
ಇದನ್ನೂ ಓದಿ :ಕಣಜ ಹುಳುವಿನಿಂದ ಗ್ರಾಮಸ್ಥರಲ್ಲಿ ಮನೆಮಾಡಿದ ಆತಂಕ... ತೋಟಕ್ಕೆ ಹೋಗಲು ಹೆದರುತ್ತಿರುವ ರೈತರು