Exercise Harimau Shakti-2023 : ಭಾರತ ಮತ್ತು ಮಲೇಷ್ಯಾ ಯೋಧರ ನಡುವೆ ಜಂಟಿ ಸಮರಾಭ್ಯಾಸ - ಭಾರತೀಯ ಸೇನೆ ಮತ್ತು ಮಲೇಶಿಯಾ ಸೇನೆ
Published : Oct 30, 2023, 11:07 AM IST
ಮೇಘಾಲಯ : ಭಾರತೀಯ ಸೇನೆ ಮತ್ತು ಮಲೇಷ್ಯಾ ಸೇನೆಯ ಯೋಧರ ನಡುವೆ ಕಳೆದ ಒಂದು ವಾರದಿಂದ ಜಂಟಿ ಸಮರಾಭ್ಯಾಸ ನಡೆಯುತ್ತಿದೆ. ಈ ಸಮರಾಭ್ಯಾಸವು ಎರಡು ದೇಶಗಳ ನಡುವೆ ವಿವಿಧ ಸೇನಾ ಕೌಶಲ್ಯಗಳನ್ನು ವಿನಿಮಯ ಮಾಡಿಕೊಳ್ಳಲು ಸಹಕಾರಿಯಾಗಲಿದೆ. ಈ ಜಂಟಿ ಸಮರಾಭ್ಯಾಸವು ಇಲ್ಲಿನ ಉಮ್ರೋಯ್ ಕಂಟೋನ್ಮೆಂಟ್ನಲ್ಲಿ ನಡೆಯುತ್ತಿದ್ದು, ಎರಡೂ ಸೇನಾಪಡೆಗಳ ಯೋಧರು ಭರ್ಜರಿ ಯುದ್ಧಾಭ್ಯಾಸದಲ್ಲಿ ತೊಡಗಿದ್ದಾರೆ. ಈ ಜಂಟಿ ಸಮರಾಭ್ಯಾಸವನ್ನು ಹರಿಮೌ ಶಕ್ತಿ 2023 ಎಂದು ಕರೆಯಲಾಗಿದೆ.
ಕಳೆದ ಅಕ್ಟೋಬರ್ 23ರಿಂದ ಈ ಜಂಟಿ ಸಮರಾಭ್ಯಾಸ ನಡೆಯುತ್ತಿದ್ದು, ನವೆಂಬರ್ 5ಕ್ಕೆ ಮುಕ್ತಾಯವಾಗಲಿದೆ. ತರಬೇತಿ ವೇಳೆ ಎರಡೂ ಸೇನೆಯ ಯೋಧರು ಭರ್ಜರಿ ತಾಲೀಮು ನಡೆಸಿದ್ದು, ನೀರಿನಲ್ಲಿ, ಕತ್ತಲಲ್ಲಿ ಮತ್ತು ಹೆಲಿಕಾಪ್ಟರ್ ಮೂಲಕ ವಿವಿಧ ತಾಲೀಮುಗಳನ್ನು ನಡೆಸಿದರು. ಇದೇ ವೇಳೆ, ಮಹಿಳಾ ಯೋಧರೊಬ್ಬರು ಹಾರುತ್ತಿರುವ ಹೆಲಿಕಾಪ್ಟರ್ನಲ್ಲಿ ನಡೆದ ಸಮರಾಭ್ಯಾಸದಲ್ಲಿ ಪಾಲ್ಗೊಂಡರು.
ಅಲ್ಲದೇ ಭಾರತೀಯ ಮತ್ತು ಮಲೇಷ್ಯಾದ ಯೋಧರು ಇಲ್ಲಿನ ದಟ್ಟ ಅರಣ್ಯಗಳಲ್ಲಿ ಸಮರಾಭ್ಯಾಸ ನಡೆಸಿದರು. ಈ ಸಮರಾಭ್ಯಾಸವು ಭಾರತ ಮತ್ತು ಮಲೇಷ್ಯಾದ ಆಂತರಿಕ ಮತ್ತು ಸೇನಾ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ಇದಕ್ಕೂ ಮುನ್ನ ಭಾರತೀಯ ಸೇನಾ ಪಡೆ ಅಮೆರಿಕಾ ಸೇನಾ ಪಡೆಯೊಂದಿಗೆ ಸಮರಾಭ್ಯಾಸ ನಡೆಸಿತ್ತು.
ಇದನ್ನೂ ಓದಿ :ಭಾರತ-ಅಮೆರಿಕ ಸೇನಾಪಡೆಗಳ ನಡುವೆ ಜಂಟಿ ಸಮರಾಭ್ಯಾಸ- ವಿಡಿಯೋ