ತಿಂಗಳಿನಿಂದ ರೈತರ ಹೊಲಗಳಲ್ಲಿ ಬೀಡುಬಿಟ್ಟ ಗಜಪಡೆ.. ಮರಿಗೆ ಜನ್ಮ ನೀಡಿದ ಹೆಣ್ಣಾನೆ - ಬೆಳೆಗಳನ್ನು ತಿಂದು ಹಾಕುತ್ತಿರುವ ಆನೆಗಳ ಹಿಂಡು
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತನ ಜಮೀನಿನಲ್ಲಿ ಬೀಡು ಬಿಟ್ಟಿರುವ ಆನೆಗಳು ಬೆಳೆಗಳನ್ನು ಹಾಳು ಮಾಡುತ್ತಿವೆ. ಇಲ್ಲಿಗೆ ಆನೆಗಳ ಹಿಂಡು ಪ್ರತಿ ವರ್ಷ ಬರುತ್ತವೆ. ನಾಲ್ಕೈದು ದಿನ ಉಳಿಯುತ್ತಿದ್ದವು. ಆದರೆ ಈ ಬಾರಿ 27 ರಿಂದ 30 ಆನೆಗಳ ಹಿಂಡು ಒಂದು ತಿಂಗಳಿನಿಂದಲೂ ಬೀಡುಬಿಟ್ಟಿದ್ದು, ಬೆಳೆದ ಬೆಳೆಗಳನ್ನು ಸಂಪೂರ್ಣವಾಗಿ ನಾಶ ಮಾಡುತ್ತಿವೆ. ಹೆಣ್ಣಾನೆಯೊಂದು ಈಗಷ್ಟೇ ಮರಿ ಹಾಕಿದೆ. ಮರಿ ಆನೆಗೆ ನಡೆದಾಡಲು ಸಾಧ್ಯವಾದಾಗ ಪಯಣ ಬೆಳೆಸುತ್ತವೆ ಎಂದು ಡಿಎಫ್‌ಒ ಎಸ್‌ಕೆ ವಿಶ್ವಲ್ ತಿಳಿಸಿದ್ದಾರೆ.
Last Updated : Feb 3, 2023, 8:28 PM IST