ಕರ್ನಾಟಕ

karnataka

ಮೂರು ಕಾಡಾನೆಗಳ ಸಾವು

ETV Bharat / videos

ವಿದ್ಯುತ್ ಬೇಲಿಗೆ ಸಿಲುಕಿ 3 ಕಾಡಾನೆಗಳು ಸಾವು; ಎಬ್ಬಿಸಲು ಮರಿಯಾನೆಗಳ ಯತ್ನ, ಜನರ ಕಣ್ಣೀರು! - ಈಟಿವಿ ಭಾರತ್​ ಕನ್ನಡ ನ್ಯೂಸ್​

By

Published : Mar 7, 2023, 11:02 AM IST

ಧರ್ಮಪುರಿ (ತಮಿಳುನಾಡು):ವಿದ್ಯುತ್ ಬೇಲಿಗೆ ಸಿಲುಕಿ ಮೂರು ಕಾಡಾನೆಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪಾಲಕೋಡ್‌ನಲ್ಲಿ ಇಂದು ಮುಂಜಾನೆ ನಡೆದಿದೆ. ಒಂದು ಗಂಡು ಮತ್ತು ಎರಡು ಹೆಣ್ಣಾನೆಗಳು ಅಸುನೀಗಿವೆ. ಎರಡು ಮರಿಯಾನೆಗಳು ಪಾರಾಗಿವೆ. 

ವಿವರ: ಧರ್ಮಪುರಿ ಜಿಲ್ಲೆಯ ಮಾರಂಡಹಳ್ಳಿ ಸಮೀಪದ ಕಾಳಿಕೌಂಡನ್ ಕೋಟೈ ಗ್ರಾಮದಲ್ಲಿ ರೈತ ಮುರುಗೇಶನ್ ಎಂಬವರಿಗೆ ಸೇರಿದ ಜಮೀನಿನಲ್ಲಿ ಘಟನೆ ನಡೆದಿದೆ. ಇವರಿಗೆ ಎರಡು ಎಕರೆ ಕೃಷಿ ಭೂಮಿ ಇದ್ದು ಜೋಳ, ರಾಗಿ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆಗಾಗ್ಗೆ ಆನೆ ಮತ್ತು ಕಾಡುಹಂದಿಗಳು ತೋಟಕ್ಕೆ ನುಗ್ಗಿ ಬೆಳೆ ನಾಶಪಡಿಸುತ್ತಿದ್ದವಂತೆ. ಇದರಿಂದ ಪಾರಾಗಲು ಮುರುಗೇಶನ್ ತನ್ನ ಕೃಷಿ ಭೂಮಿಗೆ ಅಕ್ರಮವಾಗಿ ತೋಟದ ಬಳಿ ಇರುವ ವಿದ್ಯುತ್ ಕಂಬದಿಂದ ನೇರವಾಗಿ ವಿದ್ಯುತ್ ಸಂಪರ್ಕ ಎಳೆದು ತಂತಿಗಳಿಂದ ಬೇಲಿ ಹಾಕಿದ್ದಾರೆ. 

ಆಹಾರ ಅರಸುತ್ತಾ ಕಾಡಿನಿಂದ ಗ್ರಾಮದೆಡೆಗೆ ಬಂದ ಐದು ಕಾಡಾನೆಗಳು ಮುರುಗೇಶನ್ ಜಮೀನಿಗೆ ನುಗ್ಗಿವೆ. ಈ ವೇಳೆ ವಿದ್ಯುತ್​ ಸ್ಪರ್ಶಿಸಿದ್ದು, ಮೂರು ಆನೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಸ್ಥಳಕ್ಕೆ ಪಾಲಕೋಡ್ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕಳೇಬರ ತೆರವು ಮಾಡಿದ್ದಾರೆ. ಬದುಕುಳಿದ ಮರಿಯಾನೆಗಳು ಪೋಷಕ ಆನೆಗಳ ಕಳೇಬರಗಳನ್ನು ತೆರವು ಮಾಡಲು ಕೆಲಕಾಲ ತಡೆಯೊಡ್ಡಿವೆ. ಅಷ್ಟೇ ಅಲ್ಲ, ಮರಿಯಾನೆಗಳು ಸತ್ತ ಆನೆಗಳನ್ನು ಎಬ್ಬಿಸಲು ನಡೆಸುತ್ತಿದ್ದ ಪ್ರಯತ್ನ ಮನಕಲಕುವಂತಿತ್ತು. ಇದನ್ನು ನೋಡಿ ಸ್ಥಳದಲ್ಲಿ ನೆರೆದಿದ್ದ ಜನರ ಕಣ್ಣಾಲಿಗಳು ತೇವಗೊಂಡಿದ್ದವು. ದುರಂತಕ್ಕೆ ಕಾರಣವಾದ ಮುರುಗೇಶ್​ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.   

ಇದನ್ನೂ ಓದಿ:ಮೈಸೂರು: ಉರುಳಿಗೆ ಸಿಲುಕಿ 3 ವರ್ಷದ ಹೆಣ್ಣು ಚಿರತೆ ಸಾವು

ABOUT THE AUTHOR

...view details