ಮದ್ಯದ ಅಮಲಿನಲ್ಲಿ ಆನೆಯ ದೃಶ್ಯ ಸೆರೆ ಹಿಡಿದ ಯುವಕ: ವಿಡಿಯೋ - ಮದ್ಯದ ಅಮಲಿನಲ್ಲಿದ್ದ ಯುವಕ
ಹರಿದ್ವಾರ: ಇಲ್ಲಿನ ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದಿಂದ ಜಗಜಿತ್‌ಪುರ ಪ್ರದೇಶದಲ್ಲಿನ ಕಬ್ಬು ತಿನ್ನಲು ಬಂದಿದ್ದ ಆನೆಗಳ ಹಿಂದೆ ಓಡಿ ಹೋಗಿ ಯುವಕನೊಬ್ಬ ವಿಡಿಯೋ ಚಿತ್ರೀಕರಿಸಿದ್ದಾನೆ. ಸೋಮವಾರ ರಾತ್ರಿ ಮದ್ಯದ ಅಮಲಿನಲ್ಲಿದ್ದ ಯುವಕ ಮೊಬೈಲ್ನಲ್ಲಿ ಆನೆಗಳನ್ನು ಚಿತ್ರೀಕರಿಸುವ ಸಲುವಾಗಿ ಅವುಗಳ ಹಿಂದೆ ಪ್ರಾಣವನ್ನು ಲೆಕ್ಕಿಸದೇ ಓಡಿದ್ದಾನೆ. ಇದನ್ನು ಗಮನಿಸಿದ ಆನೆಗಳು ತುಸು ದೂರ ಸಾಗುತ್ತಲೇ ತಿರುಗಿ ನಿಂತಿದೆ. ಇದನ್ನು ಕಂಡು ಯುವಕ ಭಯಭೀತಗೊಂಡಿದ್ದಾನೆ. ಆದರೂ ಯುವಕ ದೃಶ್ಯಗಳನ್ನು ಮೊಬೈಲ್ನಲ್ಲಿ ಚಿತ್ರೀಸುತ್ತಲೇ ಆನೆಗಳನ್ನು ಪ್ರಚೋದಿಸಿದ್ದು, ಅದೃಷ್ಟವಶಾತ್ ಆನೆಗಳು ಯುವಕನಿಗೆ ಯಾವುದೇ ತೊಂದರೆ ಮಾಡದೇ ಮುಂದೆ ಸಾಗಿವೆ. ಯುವಕ ಸೆರೆ ಹಿಡಿದ ಆನೆಗಳ ದೃಶ್ಯವು ವೈರಲ್ ಆಗಿದೆ.
Last Updated : Feb 3, 2023, 8:32 PM IST