ಕರ್ನಾಟಕ

karnataka

ದೇಶದಲ್ಲಿ ದಿನದಿಂದ ದಿನಕ್ಕೆ ಬೇಸಿಗೆ ಧಗೆ ಹೆಚ್ಚಾಗುತ್ತಿದೆ

ETV Bharat / videos

ಬಾಯಾರಿಕೆ.. ದೇವಸ್ಥಾನದಲ್ಲಿ ಕೈ ಪಂಪ್‌ ಒತ್ತಿ ನೀರು ಕುಡಿದ ಕಾಡಾನೆ: ವೈರಲ್ ವಿಡಿಯೋ - ಕೈ ಪಂಪ್‌ ಒತ್ತಿ ನೀರು ಕುಡಿದ ಕಾಡಾನೆ

By

Published : Apr 28, 2023, 7:11 PM IST

ಪಾರ್ವತಿಪುರಂ ಮಾನ್ಯಂ (ಆಂಧ್ರ ಪ್ರದೇಶ): ದೇಶದಲ್ಲಿ ದಿನದಿಂದ ದಿನಕ್ಕೆ ಬೇಸಿಗೆ ಧಗೆ ಹೆಚ್ಚಾಗುತ್ತಿದೆ. ಇದರ ನಡುವೆ ಆಂಧ್ರ ಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯಲ್ಲಿ ಕಾಡಾನೆಯೊಂದು ಸೊಂಡಿಲು ಮೂಲಕ ಕೈ ಪಂಪ್‌ ಒತ್ತಿ ನೀರು ಕುಡಿದು ಬಾಯಾರಿಕೆ ನೀಗಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 

ಇಲ್ಲಿನ ಕೊಮರಡ ಮಂಡಲದ ವನ್ನಂ ಗ್ರಾಮದ ದೇವಸ್ಥಾನವೊಂದರ ಆವರಣದಲ್ಲಿ ನಾಲ್ಕು ದಿನಗಳ ಹಿಂದೆ ಈ ಅಚ್ಚರಿಯ ಘಟನೆ ನಡೆದಿದೆ. ಇದನ್ನು ಗಮನಿಸಿದ ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ಆನೆ ತನ್ನ ಸೊಂಡಿಲಿನ ಸಹಾಯದಿಂದ ಕೈ ಪಂಪ್​ ಒತ್ತುತ್ತದೆ. ನಂತರ ನೀರು ಬಂದ ನಂತರ, ಅದನ್ನು ಕುಡಿಯುತ್ತದೆ. ಸುಮಾರು ಸಲ ಹೀಗೆ ಮಾಡಿ ಆನೆಯ ತನ್ನ ಬಾಯಾರಿಕೆ ನೀಗಿಸಿಕೊಂಡಿದೆ. 

ಇನ್ನು, ಈ ಕೆಲ ದಿನಗಳಿಂದ ಈ ಪ್ರದೇಶದಲ್ಲಿ ಕಾಡಾನೆಗಳು ಸಂಚಾರ ಅಧಿಕವಾಗಿದೆ. ಸಮೀಪದ ಕಾಡಿನಿಂದ ನಿರಂತರವಾಗಿ ಸುತ್ತಮುತ್ತಲಿನ ಗ್ರಾಮಗಳಿಗೆ ಲಗ್ಗೆ ಇಡುತ್ತಲೇ ಇರುತ್ತದೆ. ಬಾಳೆ ತೋಟ ಮತ್ತು ಕಬ್ಬಿನ ಗದ್ದೆಯಲ್ಲಿ ಹಿಂಡಾಗಿ ಆನೆಗಳು ಓಡಾಡುತ್ತವೆ. 

ಇದನ್ನೂ ಓದಿ:ಕೂದಲೆಳೆ ಅಂತರದಲ್ಲಿ ರೈಲು ಡಿಕ್ಕಿಯಿಂದ ಆನೆ ಪಾರು.. ವಿಡಿಯೋ

ABOUT THE AUTHOR

...view details