ಕಾಡಿನಿಂದ ಆಹಾರ ಅರಸುತ್ತ ಬಂದು ಬಾವಿಗೆ ಬಿದ್ದ ಆನೆ: ವಿಡಿಯೋ - elephant fell into a well
ಚಿತ್ತೂರು (ಆಂಧ್ರಪ್ರದೇಶ): ಆಹಾರ ಅರಸುತ್ತ ಆನೆಯೊಂದು ಕಾಡಿನಿಂದ ನಾಡಿಗೆ ಬಂದು ಬಾವಿಯೊಳಗೆ ಬಿದ್ದಿರುವ ಘಟನೆ ಚಿತ್ತೂರು ಜಿಲ್ಲೆಯ ಬಂಗೂರಪಾಲೆಂ ಮಂಡಲದ ಮೊಗಿಲಿ ಪಂಚಾಯತ್ನ ಗುಂಡ್ಲಾ ಪಲ್ಲೆ ಗ್ರಾಮದಲ್ಲಿ ನಡೆದಿದೆ. ಸೋಮವಾರ ರಾತ್ರಿ ಗ್ರಾಮದ ರೈತ ಜಗ್ಗಯ್ಯ ನಾಯ್ಡು ಎಂಬುವರ ಬಾವಿಗೆ ಆನೆ ಬಿದ್ದಿದೆ. ಗಜರಾಜನ ಗೀಳು ಕೇಳಿಸಿಕೊಂಡ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಧಿಕಾರಿಗಳು ನೀರಿನಲ್ಲಿ ಈಜಾಡುತ್ತಿದ್ದ ಆನೆಯನ್ನು ಜೆಸಿಬಿ ಸಹಾಯದಿಂದ ಹೊರತೆಗೆದಿದ್ದಾರೆ.
Last Updated : Feb 3, 2023, 8:32 PM IST