ಬೆಳಗಾವಿ-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂಟಿ ಸಲಗ; ಜನರಲ್ಲಿ ಆತಂಕ - ಕಾಡಾನೆ
ಚಿಕ್ಕೋಡಿ:ಇಂದು ಬೆಳಗ್ಗೆ ಕಾಡಾನೆಯೊಂದು ಬೆಳಗಾವಿ - ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿಕೊಂಡಿದ್ದು ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು. ಹುಕ್ಕೇರಿ ತಾಲೂಕಿನ ಹತ್ತರಿಗಿ ಟೋಲ್ ನಾಕಾ ಬಳಿ ಆನೆ ರಸ್ತೆಗೆ ಇಳಿದು ವಾಹನ ಸವಾರರಿಗೆ ಶಾಕ್ ನೀಡಿದೆ. ಆಹಾರ ಅರಸಿ ಇಲ್ಲಿಗೆ ಬಂದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆನೆಯನ್ನು ರಕ್ಷಣೆ ಮಾಡಿ ಮತ್ತೆ ಕಾಡಿಗೆ ಬಿಡಲು ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆನೆ ಕಾಲಿಗೆ ಬಿದ್ದ ವ್ಯಕ್ತಿ:ಇತ್ತೀಚೆಗೆತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪೆನ್ನಾಗರಂ ಪಕ್ಕದ ಹೊಗೇನಕಲ್ ರಸ್ತೆಯಲ್ಲಿ ಕಾಡಾನೆಯೊಂದು ನಿಂತಿದ್ದು, ಇದನ್ನು ಕಂಡು ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರು ಏಕಾಏಕಿ ಆನೆಯತ್ತ ತೆರಳಿ, ಕಣ್ಣು ಮುಚ್ಚಿ ಆನೆಗೆ ನಮಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ರೀತಿ ಕಾಡಾನೆಗಳಿಗೆ ಕಿರುಕುಳ ನೀಡುವುದು ಶಿಕ್ಷಾರ್ಹ ಅಪರಾಧ ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿ ದಂಡ ವಿಧಿಸಿದೆ.
ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಆನೆ ಕಾಲಿಗೆ ಬಿದ್ದ ವ್ಯಕ್ತಿ: 10 ಸಾವಿರ ದಂಡ ವಿಧಿಸಿದ ಅರಣ್ಯ ಇಲಾಖೆ - ವಿಡಿಯೋ ವೈರಲ್