ಚಿಕ್ಕಮಗಳೂರು : ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಹಿಂಡು.. ಕಾಫಿ, ಅಡಿಕೆ ಬೆಳೆ ನಾಶ - ರೈತರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆ
Published : Sep 18, 2023, 7:16 PM IST
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು, ತೋಟಕ್ಕೆ ನುಗ್ಗಿದ ಕಾಡಾನೆಗಳು ರೈತರು ಬೆಳೆದ ಬೆಳೆಯನ್ನು ನಾಶಪಡಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಾರಗೋಡು, ಕುಂದೂರು ಗ್ರಾಮದಲ್ಲಿ ನಡೆದಿದೆ. ರೈತರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆಗಳು, ಅಪಾರ ಪ್ರಮಾಣದ ಬೆಳೆಯನ್ನು ನಾಶಪಡಿಸಿವೆ. ಜೊತೆಗೆ ತೋಟದಲ್ಲೇ ಬೀಡುಬಿಟ್ಟಿರುವ ಕಾಡಾನೆ ಹಿಂಡು ಇನ್ನಷ್ಟು ಹಾನಿ ಮಾಡುವ ಆತಂಕ ರೈತರಿಗೆ ಎದುರಾಗಿದೆ. ಕಾಡಾನೆ ದಾಳಿಗೆ ಕಾಫಿ, ಅಡಿಕೆ ನಾಶ ಸಂಪೂರ್ಣ ನಾಶವಾಗಿದೆ. ಈ ಸಂಬಂಧ ರೈತರು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಆನೆಗಳನ್ನು ಕಾಡಿಗೆ ಅಟ್ಟಲು ಮನವಿ ಮಾಡಿದ್ದಾರೆ.
ಈ ಆನೆಗಳು ತೋಟಕ್ಕೆ ನುಗ್ಗಿರುವ ದೃಶ್ಯವನ್ನು ರೈತರೊಬ್ಬರು ಮರದ ಮೇಲೆ ಕುಳಿತು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಅರಣ್ಯ ಸಿಬ್ಬಂದಿಗಳು ಕಾಡಾನೆ ಸ್ಥಳಾಂತರಕ್ಕೆ ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಕೆಲವು ದಿನಗಳಿಂದ ಕಾಡಾನೆ ದಾಳಿ ಮುಂದುವರೆದಿದ್ದು, ಸಾಕಷ್ಟು ಬೆಳೆ ಹಾನಿ ಆಗಿದೆ ಎಂದು ರೈತರು ದೂರಿದ್ದಾರೆ. ಇದೇ ವೇಳೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ :ಚಾಮರಾಜನಗರ: ಕಬ್ಬಿನ ಲಾರಿ ಎಂದು ಬಸ್ ಅಡ್ಡಹಾಕಿದ ಗಜರಾಜ- ವಿಡಿಯೋ