ಕರ್ನಾಟಕ

karnataka

ಕಾಫಿತೋಟದಲ್ಲಿ‌ ಬೀಡುಬಿಟ್ಟು ಅಟ್ಟಹಾಸ ಮೆರೆದಿದ್ದ ಪುಂಡಾನೆ ಸೆರೆ

ETV Bharat / videos

ಮಡಿಕೇರಿ: ಕಾಫಿತೋಟದಲ್ಲೇ ಬೀಡುಬಿಟ್ಟು ಪುಂಡಾನೆ ಸೆರೆ - ಜನತೆಗೆ ಪುಂಡಾನೆ ಉಪಟಳ

By

Published : Aug 16, 2023, 6:12 PM IST

ಕೊಡಗು :ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಯನ್ನು ಬಲಿ ಪಡೆದು, ವಾಹನಗಳ ಮೇಲೆ ದಾಳಿ ಮಾಡಿ ಕಾಫಿತೋಟದಲ್ಲೇ ಬೀಡುಬಿಟ್ಟ ಪುಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಮಡಿಕೇರಿ ತಾಲೂಕಿನ ಅರೆಕಾಡು ಸಮೀಪದ ಮದರ ಕುಪ್ಪೆಯಲ್ಲಿ ಅಂದಾಜು 16 ವರ್ಷದ ಗಂಡಾನೆಯನ್ನು ಸಿಬ್ಬಂದಿ ಸಾಕಾನೆಗಳ ಸಹಾಯದಿಂದ ಸೆರೆ ಹಿಡಿದರು.

ಮಡಿಕೇರಿ ಮತ್ತು ಸೋಮವಾರ ಪೇಟೆ ತಾಲೂಕುಗಳಲ್ಲಿ ಕಳೆದ ಹಲವು ದಿನಗಳಿಂದ ಈ ಆನೆ ಉಪಟಳ ನೀಡುತ್ತಿತ್ತು. ಕಳೆದ ಎರಡು ದಿನಗಳ ಹಿಂದೆ ಓರ್ವನನ್ನು ಬಲಿ ಪಡೆದಿತ್ತು. ಕಾಫಿ ತೋಟದಲ್ಲೇ ತಂಗಿ, ಬೆಳೆ ನಾಶ ಮಾಡುತ್ತಿತ್ತು. ಇದೀಗ ಒಂಟಿ ಸಲಗದ ಸೆರೆಯಿಂದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತಿಗೋಡು, ದುಬಾರೆ ಶಿಬಿರದ ಐದು ಸಾಕಾನೆಗಳ ಸಹಕಾರದೊಂದಿಗೆ ಸತತ ಎರಡು ದಿನಗಳ ಕಾಲ ಕಾವಡಿ ಮಾವುತರು ಹಾಗೂ 50ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ನಿನ್ನೆ ಕಾಫಿ ತೋಟದಲ್ಲಿ ಕಾಣಿಸಿಕೊಂಡ ಕಾಡಾನೆ ಗುರುತಿಸಿ ಮಧ್ಯಾಹ್ನದ ವೇಳೆಗೆ ಅರಿವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ನಂತರ ಸ್ವಲ್ಪ ದೂರ ಓಡಿಹೋದ ಆನೆ ಸುಸ್ತಾಗಿ ಬಿದ್ದಿತ್ತು. ಮಾವುತರು, ಕಾವಾಡಿಗಳು, ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಆನೆ ಮೈಮೇಲೆ ನೀರು ಸುರಿದು ಹಗ್ಗಕಟ್ಟಿ ಬಂಧಿಸಿದರು. 

ಇದನ್ನೂ ಓದಿ:ರಾಮನಗರದಲ್ಲಿ ಇಬ್ಬರು ರೈತರ ಬಲಿ ಪಡೆದ ಒಂಟಿ ಸಲಗ ಕೊನೆಗೂ ಸೆರೆ

ABOUT THE AUTHOR

...view details