ಲಾರಿ ಪಂಚರ್, ಮುಸುಕಿನ ಜೋಳ ಗುಳುಂ ಮಾಡಿದ ಗಜರಾಜ- ವಿಡಿಯೋ - ಸಂಚಾರ ಅಸ್ತವ್ಯಸ್ತ
ಚಾಮರಾಜನಗರ: ಹೆದ್ದಾರಿಯಲ್ಲಿ ಪಂಚರ್ ಆಗಿ ನಿಂತಿದ್ದ ಲಾರಿ ಸಮೀಪ ಆಗಮಿಸಿದ ಕಾಡಾನೆಯೊಂದು ಮುಸುಕಿನ ಜೋಳವನ್ನು ಒಂದು ತಾಸಿಗೂ ಹೆಚ್ಚು ಕಾಲ ತಿಂದಿರುವ ಘಟನೆ ಕರ್ನಾಟಕ-ತಮಿಳುನಾಡು ಗಡಿ ಚಾಮರಾಜನಗರ ತಾಲೂಕಿನ ಪುಣಜನೂರು ಚೆಕ್ ಪೋಸ್ಟ್ ಸಮೀಪ ಗುರುವಾರ ನಡೆಯಿತು. ಮುಸುಕಿನಜೋಳದ ಮೂಟೆಗಳನ್ನು ಹೊತ್ತು ತಮಿಳುನಾಡಿಗೆ ಸಾಗಿಸುತ್ತಿದ್ದ ಲಾರಿ ಪಂಚರ್ ಆಗಿದ್ದು, ರಸ್ತೆ ಬದಿ ನಿಂತಿತ್ತು. ಚಾಲಕ ಮೆಕಾನಿಕ್ ಕರೆತರಲು ಹೋಗಿದ್ದಾಗ ಆನೆ ಲಗ್ಗೆ ಇಟ್ಟಿದೆ.
ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತ: ಹಸಿವಿನಿಂದ ಕಂಗೆಟ್ಟಿದ್ದ ಸಲಗ ಲಾರಿಯಲ್ಲಿದ್ದ ಮುಸುಕಿನ ಜೋಳ ತಿನ್ನಲು ಶುರು ಮಾಡಿದೆ. ಹೀಗಾಗಿ, ಒಂದು ತಾಸಿಗೂ ಹೆಚ್ಚು ಸಮಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ಕಾಡಿಗಟ್ಟಿದರು. ಅಂದಾಜು ಒಂದು ಗಂಟೆ ನಿಂತಲ್ಲೇ ನಿಂತಿದ್ದ ವಾಹನಗಳು ಮತ್ತೆ ಸರಾಗ ಸಂಚಾರ ಆರಂಭಿಸಿದವು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕುತೂಹಲ ಮೂಡಿಸಿದೆ.
ಇದನ್ನೂಓದಿ:ಕಲಬುರಗಿಯಲ್ಲಿ ರಾಮನವಮಿ ಸಂಭ್ರಮ: ಶೋಭಾಯಾತ್ರೆಯಲ್ಲಿ ಹಿಂದು ಮುಸ್ಲಿಂ ಬಾಯ್ ಬಾಯ್