ಕರ್ನಾಟಕ

karnataka

ETV Bharat / videos

30 ಜನ ಪ್ರಯಾಣಿಕರಿದ್ದ ಬಸ್​ ಮೇಲೆ ಕಾಡಾನೆ ದಾಳಿ.. ಬಸ್​ ಗಾಜು ಪುಡಿಪುಡಿ.. ವಿಡಿಯೋ ವೈರಲ್​ - Etv Bharat Kanadda

By

Published : Jan 13, 2023, 9:35 PM IST

Updated : Feb 3, 2023, 8:38 PM IST

ಈರೋಡ್(ತಮಿಳುನಾಡು):ತಮಿಳುನಾಡಿನ ಸರ್ಕಾರಿ ಬಸ್​ವೊಂದರ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಕೇತೆಸಾಲ್​ ಎಂಬ ಪ್ರದೇಶದಲ್ಲಿ ನಡೆದಿದೆ. ಕರ್ನಾಟಕದ ಕೊಳ್ಳೇಗಾಲದಿಂದ ತಮಿಳುನಾಡಿನ ಸತ್ಯಮಂಗಳಂಗೆ ತೆರಳುತ್ತಿದ್ದ ಬಸ್​ ಮೇಲೆ ಈ ದಾಳಿ ನಡೆಸಿದೆ. ಇನ್ನು ಬಸ್​ನಲ್ಲಿ ಸುಮಾರು 30 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಕಾಡಾನೆ ದಾಳಿಗೆ ಬಸ್​ನ ಮುಂಭಾಗದ ಗಾಜ ಒಡೆದು ಹೋಗಿದೆ. ಬಸ್​​ನಲ್ಲಿದ್ದ ಪ್ರಯಾಣಿಕರು ಕ್ಷಣಕಾಲ ಆತಂಕಗೊಂಡಿದ್ದರು. ಪ್ರಯಾಣಿಕರೊಬ್ಬರು ಘಟನೆಯ ವಿಡಿಯೋವನ್ನು ಮೊಬೈಲ್​ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.      

ಇದನ್ನೂ ಓದಿ:ಅಟ್ಟಹಾಸ ಮೆರೆದಿದ್ದ ಕಾಡಾನೆ ಅಂತೂ ಸೆರೆ: ಆನೆ ಶಿಬಿರಕ್ಕೆ ಸ್ಥಳಾಂತರ

Last Updated : Feb 3, 2023, 8:38 PM IST

ABOUT THE AUTHOR

...view details