ಕರ್ನಾಟಕ

karnataka

ಟ್ರಾನ್ಸ್‌ಫಾರ್ಮರ್ ಸ್ಪೋಟದಿಂದ ಅಗ್ನಿ ಅವಘಡ

ETV Bharat / videos

ಬೆಂಗಳೂರಲ್ಲಿ ಟ್ರಾನ್ಸ್‌ಫಾರ್ಮರ್ ಸ್ಫೋಟದಿಂದ ಅಗ್ನಿ ಅವಘಡ.. ಮನೆ, ಗುಜರಿ ಅಂಗಡಿ ಸೇರಿ ವಾಹನಗಳು ಬೆಂಕಿಗಾಹುತಿ

By ETV Bharat Karnataka Team

Published : Oct 14, 2023, 4:26 PM IST

ಬೆಂಗಳೂರು: ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಫೋಟದಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಗುಜುರಿ ಅಂಗಡಿ ಹಾಗೂ ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾದ ಘಟನೆ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ಲಗ್ಗೆರೆಯಲ್ಲಿ ನಡೆದಿದೆ. ವಿಷಯ ತಿಳಿದು ಕೂಡಲೇ ಅಗ್ನಿಶಾಮಕ ದಾಳ ಘಟನಾ ಸ್ಥಳಕ್ಕೆ ಆಗಮಿಸಿದ್ದು, ಎರಡು ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. 

ಶಾರ್ಟ್ ಸರ್ಕ್ಯೂಟ್ ಅಥವಾ ತಾಂತ್ರಿಕ ದೋಷದಿಂದ ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡಿರುವ ಪರಿಣಾಮ ಪಕ್ಕದಲ್ಲಿದ್ದ ಗುಜರಿ ಅಂಗಡಿಗೆ ಬೆಂಕಿ ತಗುಲಿದೆ. ನೋಡ ನೋಡುತ್ತಿದ್ದಂತೆ ಅಂಗಡಿ ಪಕ್ಕದಲ್ಲಿದ್ದ ಎರಡು ಮನೆಗಳಿಗೆ ಬೆಂಕಿಯ ಕಿಡಿ ತಗುಲಿದೆ. ಇದನ್ನು ಕಂಡ ಮನೆಯವರು ತಕ್ಷಣ ಹೊರ ಓಡಿ ಬಂದಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಎರಡ್ಮೂರು ದ್ವಿಚಕ್ರ ವಾಹನಗಳು ಸಹ ಸುಟ್ಟು ಕರಕಲಾಗಿವೆ. 

ಅಗರಬತ್ತಿ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ:ಇಂದುಬೆಳಗ್ಗೆ ಸಂಭವಿಸಿದ ಮತ್ತೊಂದು ಘಟನೆಯಲ್ಲಿ ಅಗರಬತ್ತಿ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಜೋಗುಪಾಳ್ಯದ ಪೈಪ್​ಲೈನ್ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಬೆಂಕಿ ಅವಘಡದಿಂದಾಗಿ ಫ್ಯಾಕ್ಟರಿಯಲ್ಲಿದ್ದ ಕೆಮಿಕಲ್ ಲಿಕ್ವಿಡ್ ಹರಿದು ರಸ್ತೆಗೂ ಬೆಂಕಿ ಹಬ್ಬಿದ್ದು, 8 ಬೈಕ್​ಗಳು​ ಅಗ್ನಿಗಾಹುತಿಯಾಗಿವೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಹೊತ್ತಿ ಉರಿದ ಅಗರಬತ್ತಿ ಕಾರ್ಖಾನೆ

ABOUT THE AUTHOR

...view details