ವಿದ್ಯುತ್ ದೀಪಾಲಂಕಾರ.. ಕಂಗೊಳಿಸಿದ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ನಿಜಗಲ್ಲು ಸಿದ್ದರಬೆಟ್ಟ - etv bharath kannada news
500 ವರ್ಷಕ್ಕೂ ಹೆಚ್ಚು ಇತಿಹಾಸವಿರುವ ನಿಜಗಲ್ಲು ಸಿದ್ದರಬೆಟ್ಟಕ್ಕೆ ವಿದ್ಯುತ್ ದೀಪದ ಬೆಳಕಿನ ಮೂಲಕ ಇಡೀ ಬೆಟ್ಟವನ್ನು ಸಿಂಗಾರ ಮಾಡಲಾಗಿದೆ. ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಸಿದ್ದರಬೆಟ್ಟ ವಿವಿಧ ಬಣ್ಣಗಳ ವಿದ್ಯುತ್ ದೀಪಾಲಂಕಾರದಿಂದ ಎಲ್ಲರ ಗಮನ ಸೆಳೆಯುತ್ತಿದೆ. ಹನುಮ ಜಯಂತಿಯಂದು ಬೆಟ್ಟಕ್ಕೆ 500 ಹನುಮ ಮಾಲೆ ಧರಿಸಿದ ಭಕ್ತರು ಬೆಟ್ಟಕ್ಕೆ ಪಾದಯಾತ್ರೆ ಮಾಡಲಿದ್ದಾರೆ. ನೆಲಮಂಗಲ ತಾಲೂಕಿನ ನಿಜಗಲ್ಲು ಸಿದ್ದರಬೆಟ್ಟಕ್ಕೆ 500ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಹೊಯ್ಸಳ, ವಿಜಯನಗರ, ಮರಾಠ, ಮೈಸೂರು ಒಡೆಯರ ಆಳ್ವಿಕೆಗೆ ಒಳಪಟ್ಟ ಪ್ರದೇಶ, ನಿಜಗಲ್ಲು ದುರ್ಗಕ್ಕೆ ಸಿದ್ದರಬೆಟ್ಟ, ಉದ್ದಂಡಯ್ಯನ ಬೆಟ್ಟ, ಶೂರಗಿರಿ ಅಂತಾನು ಕರೆಯಲಾಗಿದೆ.
Last Updated : Feb 3, 2023, 8:34 PM IST