ಕರ್ನಾಟಕ

karnataka

ಹೋಟೆಲ್​ ಮೇಲೆ ವಿಚಕ್ಷಣ ದಳ ದಾಳಿ

ETV Bharat / videos

ಹಾವೇರಿ: ಹೋಟೆಲ್ ಮೇಲೆ ವಿಚಕ್ಷಣಾ ದಳ ದಾಳಿ, ₹6 ಲಕ್ಷ ವಶಕ್ಕೆ - ಈಟಿವಿ ಭಾರತ ಕನ್ನಡ

By

Published : May 9, 2023, 7:13 AM IST

ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ‌ಯಾಸೀರ್​ ಖಾನ್ ಪಠಾಣ್ ಅವರಿ​ಗೆ ಸೇರಿದ ಹೋಟೆಲ್ ಮೇಲೆ ಕಳೆದ ರಾತ್ರಿ ಚುನಾವಣಾ ವಿಚಕ್ಷಣ ದಳ ದಾಳಿ ಮಾಡಿದೆ. ಬಂಕಾಪುರ ಟೋಲ್ ನಾಕಾ ಬಳಿ ಇರುವ ಹೋಟೆಲ್‌ನಲ್ಲಿ ಶೋಧ ನಡೆಸಿದ ಫ್ಲೈಯಿಂಗ್ ಸ್ಕ್ವಾಡ್, ಆರು ಲಕ್ಷ ರೂಪಾಯಿ ವಶಕ್ಕೆ ಪಡೆದಿದ್ದಾರೆ. ಈ ಹಣವನ್ನು ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ. ಒಂದೊಂದು ಕವರ್​ನಲ್ಲಿ ಸುಮಾರು 3 ಸಾವಿರ ರೂಪಾಯಿ ಹಾಕಿ ಇಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. 

ಚುನಾವಣಾ ಅಧಿಕಾರಿಗಳು ಬಂಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಯಾಸೀರ್​ ಖಾನ್ ಪಠಾಣ್ ಶಿಗ್ಗಾಂವಿ ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇದಕ್ಕೂ ಮೊದಲು ಕಾಂಗ್ರೆಸ್ ಈ ಕ್ಷೇತ್ರಕ್ಕೆ ಯೂಸೂಫ್​ ಸವಣೂರು ಅವರನ್ನು ಆಯ್ಕೆ ಮಾಡಿತ್ತು. ಬಳಿಕ ಸವಣೂರು ಬದಲಿಗೆ ಜಿಲ್ಲಾ ಪಂಚಾಯತ್​ ಮಾಜಿ ಸದಸ್ಯ ಯಾಸೀರ್​ ಖಾನ್​ ಪಠಾಣ್​ ಅವರನ್ನು ಘೋಷಣೆ ಮಾಡಿ ಸಿಎಂ ವಿರುದ್ಧ ಕಣಕ್ಕಿಳಿಸಿದೆ.

ಇದನ್ನೂ ಓದಿ:ಚುನಾವಣಾ ಆಯೋಗದಿಂದ ಕಾಂಗ್ರೆಸ್ ಅಧ್ಯಕ್ಷ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಷೋಕಾಸ್ ನೋಟಿಸ್

ABOUT THE AUTHOR

...view details