ಭಲೇ ಅಜ್ಜಿ.. ಗಂಗಾ ನದಿಗೆ ಹಾರಿ ಈಜಿದ 70ರ ವೃದ್ಧೆ! Video - ಹರ್ ಕಿ ಪೌರಿ ಸೇತುವೆ
ಹರಿದ್ವಾರ(ಉತ್ತರಾಖಂಡ): ಹರಿಯಾಣ ಮೂಲದ ಸುಮಾರು 70 ವರ್ಷದ ವೃದ್ಧೆ ಹರ್ ಕಿ ಪೌರಿಯ ಎತ್ತರದ ಸೇತುವೆಯಿಂದ ಗಂಗಾನದಿಗೆ ಹಾರಿದ್ದಾರೆ. ಪವಿತ್ರ ಗಂಗಾ ಸ್ನಾನ ಮಾಡಲು ಬಂದ ಅವರು ಕೆಲವು ಯುವಕರು ಸೇತುವೆಯಿಂದ ಗಂಗೆಗೆ ಜಿಗಿಯುತ್ತಿರುವುದನ್ನು ಕಂಡು ಉತ್ಸುಕರಾಗಿ ಈ ರೀತಿ ಮಾಡಿದ್ದಾರೆ. ಸೇತುವೆ ಮೇಲಿಂದ ಸುಲಭವಾಗಿ ನೀರಿಗೆ ಹಾರಿ ಅಜ್ಜಿ ಈಜಿದ್ದಾರೆ. ಅವರು ಹೀಗೆ ಜಿಗಿಯುವುದನ್ನು ಕಂಡವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸದ್ದು ಮಾಡುತ್ತಿದೆ.
Last Updated : Feb 3, 2023, 8:24 PM IST