ಚಿಕ್ಕಮಗಳೂರಲ್ಲಿ ಮುಸ್ಲಿಂ ಬಾಂಧವರಿಂದ ಈದ್ ಮಿಲಾದ್ ಆಚರಣೆ - eid milad celebration in chikkamagaluru
ಚಿಕ್ಕಮಗಳೂರು: ನಗರದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನ, ಈದ್ ಮಿಲಾದ್ ಹಬ್ಬವನ್ನು ಮುಸ್ಲಿಮರು ಬೃಹತ್ ಮೆರವಣಿಗೆ ಮಾಡುವುದರ ಮೂಲಕ ಸಂಭ್ರಮ ಮತ್ತು ಸಡಗರದಿಂದ ಆಚರಿಸಿದರು. 30 ಸಾವಿರಕ್ಕೂ ಅಧಿಕ ಮುಸ್ಲಿಂರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೊದಲು ಅಂಡೇ ಚತ್ರದಿಂದ ಪ್ರಾರಂಭವಾದ ಮೆರವಣಿಗೆ ಎಂಜಿ ರಸ್ತೆಯ ಮೂಲಕ ಸಾಗಿ ತೊಗರಿಹಂಕಲ್ ಸರ್ಕಲ್, ಐಜಿ ರಸ್ತೆಯ ಮೂಲಕ ಹನುಮಂತಪ್ಪ ವೃತ್ತ, ನಂತರ ಮತ್ತೆ ಎಂಜಿ ರಸ್ತೆಯ ಮೂಲಕ ಸಾಗಿ ಅಂಡೇ ಚತ್ರದಲ್ಲಿ ಅಂತ್ಯಗೊಂಡಿತು. ಹಬ್ಬದ ಹಿನ್ನಲೆಯಲ್ಲಿ ನಗರದ ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
Last Updated : Feb 3, 2023, 8:29 PM IST