ಕರ್ನಾಟಕ

karnataka

ಅವರಿಗೆ ಉನ್ನತ ಜ್ಞಾನವಿದ್ದರೆ ನಾನು ಕೇಳಲು ಸಿದ್ಧ: ರಾಹುಲ್ ಹೇಳಿಕೆಗೆ ಸಚಿವ ಜೈಶಂಕರ್ ತೀಕ್ಷ್ಣ ಪ್ರತಿಕ್ರಿಯೆ

ETV Bharat / videos

LACಗೆ ಸೇನೆ ಕಳುಹಿಸಿದ್ದು ರಾಹುಲ್ ಗಾಂಧಿ ಅಲ್ಲ, ಮೋದಿ: ಸಚಿವ ಎಸ್‌.ಜೈಶಂಕರ್ - ಪ್ರಧಾನಿ ನರೇಂದ್ರ ಮೋದಿ

By

Published : Feb 21, 2023, 6:41 PM IST

Updated : Feb 21, 2023, 7:15 PM IST

ನವದೆಹಲಿ: ಭಾರತ ಮತ್ತು ಚೀನಾ ಗಡಿ ಬಿಕ್ಕಟ್ಟು ವಿಷಯವಾಗಿ ಕಾಂಗ್ರೆಸ್​ ನಾಯಕ, ಸಂಸದ ರಾಹುಲ್​ ಗಾಂಧಿ ಹೇಳಿಕೆಗೆ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅವರಿಗೆ (ರಾಹುಲ್​) ಈ ಬಗ್ಗೆ ಉನ್ನತ ಜ್ಞಾನ ಮತ್ತು ಬುದ್ಧಿವಂತಿಕೆ ಇದ್ದರೆ ನಾನು ಯಾವಾಗಲೂ ಅವರ ಮಾತು ಕೇಳಲು ಸಿದ್ಧ ಎಂದು ತಿರುಗೇಟು ನೀಡಿದ್ದಾರೆ.

ವಿದೇಶಾಂಗ ವ್ಯವಹಾರ ಸಚಿವರಿಗೆ ವಿದೇಶಾಂಗ ನೀತಿ ಬಗ್ಗೆ ಹೆಚ್ಚು ತಿಳಿದಿಲ್ಲ. ಅವರು ಇನ್ನಷ್ಟು ತಿಳಿದುಕೊಳ್ಳಬೇಕೆಂದು ರಾಹುಲ್ ಗಾಂಧಿ ಇತ್ತೀಚೆಗೆ ಹೇಳಿದ್ದರು. ಈ ಬಗ್ಗೆ ಎಎನ್​ಐ ಸುದ್ದಿ ಸಂಸ್ಥೆಯ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಜೈಶಂಕರ್​, 1962ರಲ್ಲಿ ಏನಾಯಿತು ಎಂಬುದನ್ನು ತಿಳಿದುಕೊಳ್ಳುವ ಪ್ರಾಮಾಣಿಕತೆ ಪ್ರತಿಪಕ್ಷಕ್ಕೆ ಇರಬೇಕು. ಚೀನಾದ ಸೇನೆಯ ನಿಯೋಜನೆಗೆ ಪ್ರತಿಯಾಗಿ ಸೇನೆಯನ್ನು ಪೂರ್ವ ಲಡಾಖ್‌ನ ಎಲ್‌ಎಸಿಗೆ ಕಳುಹಿಸಿದ್ದು ರಾಹುಲ್ ಗಾಂಧಿಯಲ್ಲ, ಪ್ರಧಾನಿ ನರೇಂದ್ರ ಮೋದಿ ಎಂದರು.

ಆ ಪ್ರದೇಶವು ನಿಜವಾಗಿಯೂ ಯಾವಾಗ ಚೀನಾದ ನಿಯಂತ್ರಣಕ್ಕೆ ಒಳಪಟ್ಟಿತ್ತು?. 'ಸಿ'ಯಿಂದ ಪ್ರಾರಂಭವಾಗುವ ಪದಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಅವರು (ಕಾಂಗ್ರೆಸ್​) ಕೆಲವು ಸಮಸ್ಯೆಗಳನ್ನು ಹೊಂದಿರಬೇಕು. ಉದ್ದೇಶಪೂರ್ವಕವಾಗಿಯೇ ಈಗಿನ ಪರಿಸ್ಥಿತಿಯನ್ನು ತಪ್ಪಾಗಿ ಪ್ರಸ್ತಾಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

1958ರಲ್ಲೇ ಚೀನಿಯರು ಮೊದಲು ಬಾರಿಗೆ ಆ ಪ್ರದೇಶಕ್ಕೆ ಬಂದರು. 1962ರ ಅಕ್ಟೋಬರ್‌ನಲ್ಲಿ ಅದನ್ನು ವಶಪಡಿಸಿಕೊಂಡರು. 1962ರಲ್ಲಿ ಚೀನೀಯರು ವಶಪಡಿಸಿಕೊಂಡ ಸೇತುವೆ ಬಗ್ಗೆ ಈಗ 2023ರಲ್ಲಿ ಮೋದಿ ಸರ್ಕಾರವನ್ನು ದೂಷಿಸಲು ಹೊರಟಿದ್ದೀರಿ. ಅದು ಎಲ್ಲಿದೆ, ಅದು ಹೇಗೆ ಸಂಭವಿಸಿತು ಎಂದು ಕೇಳುವ ನೈತಿಕತೆ ನಿಮಗಿಲ್ಲ ಎಂದು ಜೈಶಂಕರ್​ ಟೀಕಿಸಿದರು.

ಇದೇ ವೇಳೆ 1988ರಲ್ಲಿ ರಾಜೀವ್ ಗಾಂಧಿ ಬೀಜಿಂಗ್‌ಗೆ ಹೋಗಿದ್ದರು. 1993 ಮತ್ತು 1996ರಲ್ಲಿ ಒಪ್ಪಂದಗಳಿಗೆ ಸಹಿ ಹಾಕಿದ್ದರು. ಆ ಒಪ್ಪಂದಗಳಿಗೆ ಸಹಿ ಹಾಕುವುದು ತಪ್ಪು ಎಂದು ನಾನು ಭಾವಿಸುವುದಿಲ್ಲ. ಇದರಲ್ಲಿ ರಾಜಕೀಯ ಮಾತನಾಡಲಾರೆ. ಆದರೆ, ಈ ಸಮಯದಲ್ಲಿ ನಮಗೆ ಗಡಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಅಗತ್ಯವಿತ್ತು. ಹೀಗಾಗಿ ಆ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು ಎಂದು ಸಚಿವರು ಹೇಳಿದ್ದಾರೆ. 

ಇದನ್ನೂ ಓದಿ:ವಂಚನೆ ಪ್ರಕರಣ: ಸಂಧ್ಯಾ ಕನ್ವೆನ್ಷನ್​ ಎಂಡಿ ಶ್ರೀಧರ್​ ರಾವ್​ ದೆಹಲಿ ಪೊಲೀಸ್​ ಕಸ್ಟಡಿಗೆ

Last Updated : Feb 21, 2023, 7:15 PM IST

ABOUT THE AUTHOR

...view details