ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಈ ಬಾರಿ ಟಿಕೆಟ್ ಕೊಡುವುದು ಕಷ್ಟ : ಡಿ ವಿ ಸದಾನಂದ ಗೌಡ - Etv Bharat Kannada
ಕೊಡಗು:ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರಿಗೆ ಟಿಕೆಟ್ ಕೊಡುವುದು ಕಷ್ಟ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿದರು. ಇಲ್ಲಿಯ ಗೋಣಿಕೊಪ್ಪಲು ವಿನಲ್ಲಿ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಪಾಲ್ಗೊಂಡು ಅವರು ಮಾತನಾಡಿದರು. ಈ ಬಾರಿ ಚುನಾವಣೆಗೆ ಯಾವೆಲ್ಲ ಶಾಸಕರಿಗೆ ಟಿಕೆಟ್ ಸಿಗಲಿದೆ ಎಂದು ಸಂಸದೀಯ ಮಂಡಳಿಯಲ್ಲಿ ಚರ್ಚೆಗಳಾಗುತ್ತವೆ. ನಮಗೆ ಅದರ ಬಗ್ಗೆ ಮಾಹಿತಿ ಇಲ್ಲ. ಕೊನೆಯ ಸರ್ವೇ ನಂತರ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ ಎಂದರು.
ಬಳಿಕ ರಾಜ್ಯದ ಕೆಲವು ಹಾಲಿ ಶಾಸಕರಿಗೆ ಈ ಬಾರಿ ಟಿಕೇಟ್ ಕೈತಪ್ಪಬಹುದು ಎಂಬ ಮಾಜಿ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಶಾಸಕ ಮಾಡಾಳ್ ವಿರೂಪಾಕ್ಷಪ್ಪರಿಗೆ ಟಿಕೆಟ್ ಕೊಡುವುದು ಕಷ್ಟ. ಇದೇ ರೀತಿ ಕೆಲವರಿಗೆ ಕೈ ತಪ್ಪಬಹುದು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಹೇಳಿಕೆ ನೀಡಿರಬಹುದು ಎಂದು ತಿಳಿಸಿದರು.
ಮೋದಿ ಆಗಮನದ ಬಗ್ಗೆ ಕಾಂಗ್ರೆಸ್ ಟೀಕಿಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷಕ್ಕೆ ಸರಿಯಾದ ನಾಯಕರೇ ಇಲ್ಲ. ಕಾಂಗ್ರೇಸ್ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಇದ್ದಾರೆ ಇವರಿಬ್ಬರನ್ನು ತಬ್ಬಿಕೊಳ್ಳುವಂತೆ ಮಾಡಲು ರಾಹುಲ್ ಗಾಂಧಿ ಸಾಕಷ್ಟು ಪ್ರಯತ್ನ ಮಾಡಿದರು. ಆದರೇ ಅವರಿಬ್ಬರು ತಬ್ಬಿಕೊಳ್ಳಲು ಸಿದ್ಧರಿಲ್ಲ, ಇಬ್ಬರ ಬಳಿ ಚಾಕು ಇದೆ. ತಬ್ಬಿಕೊಳ್ಳಲು ಹೆದರಿಕೆ ಇದೆ, ಎಲ್ಲಿ ಯಾರೂ ಚಾಕು ಹಾಕುತ್ತಾರೆಂಬ ಆತಂಕವಿದೆ. ಕಾಂಗ್ರೆಸ್ ಪಕ್ಷದ ಸ್ಥಿತಿ ಹೀಗಿದೆ ಎಂದು ಕಾಂಗ್ರೆಸ್ ವಿರುದ್ಧ ಸದಾನಂದ ಗೌಡ ಲೇವಡಿ ಮಾಡಿದರು.
ಇದನ್ನೂ ಓದಿ:ಸಿಸಿ ಪಾಟೀಲ್ ನನಗೆ ಯಾಮಾರಿಸಿ ಎರಡು ಸಾವಿರ ಕೋಟಿ ಅನುದಾನ ತಂದಿದ್ದಾರೆ : ಸಿಎಂ ಬೊಮ್ಮಾಯಿ