ದತ್ತ ಜಯಂತಿ ಶೋಭಾ ಯಾತ್ರೆ.. ಕೇಸರಿಮಯವಾದ ಕಾಫಿನಾಡು, ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ಅದ್ಭುತ ಕ್ಷಣಗಳು - ಕೇಸರಿಮಯವಾದ ಕಾಫಿನಾಡು
ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ನಗರದಲ್ಲಿ ಬೃಹತ್ ದತ್ತ ಜಯಂತಿ ಶೋಭ ಯಾತ್ರೆ ನಡೆಯತು. ಬಸವನಹಳ್ಳಿ ಹಾಗೂ ಎಮ್ ಜಿ ರಸ್ತೆ ಮೂಲಕ ಶೋಭಾ ಯಾತ್ರೆ ಸಾಗಿದ್ದು, ಡ್ರೋನ್ ಕ್ಯಾಮರಾದಲ್ಲಿ ಅದ್ಭುತ ಚಿತ್ರಣ ಸೆರೆಯಾಗಿದೆ. ಚಿಕ್ಕಮಗಳೂರು ನಗರ ಸಂಪೂರ್ಣ ಕೇಸರಿಯಿಂದ ತುಂಬಿ ಹೋಗಿತ್ತು. ಶೋಭಾ ಯಾತ್ರೆಯ ಮೆರವಣಿಗೆಯಲ್ಲಿ ಡಿಜೆ ಹಾಡಿಗೆ ಯುವಕ - ಯುವತಿಯರು ಕುಣಿದು ಕುಪ್ಪಳಿಸಿದ್ದಾರೆ. ಶೋಭಾ ಯಾತ್ರೆಯಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿದ್ದರು.
Last Updated : Feb 3, 2023, 8:35 PM IST