ದಾವಣಗೆರೆ: ಕೇಸರಿ ಪೇಟ, ಶಾಲು ಧರಿಸಿ, ಖಡ್ಗ ಹಿಡಿದು ಹಿಂದೂ ಕಾರ್ಯಕರ್ತರಿಂದ ದುರ್ಗಾ ಮಾತಾ ದೌಡ್ ಮೆರವಣಿಗೆ: ವಿಡಿಯೋ - dasara 2023
Published : Oct 23, 2023, 3:36 PM IST
ದಾವಣಗೆರೆ: ಇಂದು ನಾಡಿನೆಲ್ಲೆಡೆ ದಸರಾ ಆಯುಧ ಪೂಜೆ ಸಂಭ್ರಮ. ದಾವಣಗೆರೆಯಲ್ಲಿ ಹಿಂದೂಪರ ಕಾರ್ಯಕರ್ತರು ದುರ್ಗಾ ಮಾತಾ ದೌಡ್ ಮೆರವಣಿಗೆ ನಡೆಸಿದರು. ನೂರಾರು ಜನರು ಪಾಲ್ಗೊಂಡಿದ್ದರು. ಕೇಸರಿ ಪೇಟ, ಕೇಸರಿ ಶಾಲು ಧರಿಸಿ, ಕೈಯಲ್ಲಿ ಭಗವಾಧ್ವಜ ಹಾಗು ಖಡ್ಗ ಹಿಡಿದು ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆಯುದ್ದಕ್ಕೂ ಮಹಿಳೆಯರು ಮತ್ತು ಯುವಕರು ಘೋಷಣೆಗಳನ್ನು ಕೂಗಿದರು. ದುರ್ಗಾ ದೌಡ್ ಮೆರವಣಿಗೆ ಶಿವಾಜಿ ವೃತ್ತದಿಂದ ಆರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ದುರ್ಗಾ ಮಾತೆಯ ಫೋಟೋವನ್ನು ಮೆರವಣಿಗೆ ಮಾಡಲಾಯಿತು. ಆಯುಧ ಪೂಜೆಯ ದಿನದಂದು ವಿವಿಧ ಆಯುಧಗಳನ್ನು ಹಿಡಿದು ಪ್ರದರ್ಶನ ಮಾಡುವುದು ಸಂಪ್ರದಾಯ.
ಇದನ್ನೂ ಓದಿ:ಚಾಮರಾಜನಗರ: ಚರ್ಚ್ನಲ್ಲೂ ಆಯುಧ ಪೂಜೆ ಸಂಭ್ರಮ!!
ಬೆಳಗಾವಿಯಲ್ಲಿ ದುರ್ಗಾ ಮಾತಾ ದೌಡ್:ಇತ್ತೀಚಿಗೆ, ಬೆಳಗಾವಿಯಲ್ಲಿ ನವರಾತ್ರಿ ಅಂಗವಾಗಿ ಪ್ರತಿ ವರ್ಷದಂತೆ 9 ದಿನಗಳ ದುರ್ಗಾ ಮಾತಾ ದೌಡ್‌ಗೆ (ಓಟ) ಅದ್ಧೂರಿ ಸ್ವಾಗತ ಸಿಕ್ಕಿತ್ತು. ದೇಶ, ಧರ್ಮ ಪ್ರೇಮ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಶಿವಪ್ರತಿಷ್ಠಾನ ಹಿಂದುಸ್ಥಾನ ಸಂಘಟನೆಯಿಂದ ಕಳೆದ 21 ವರ್ಷಗಳಿಂದ ದುರ್ಗಾ ಮಾತಾ ದೌಡ್ ಆಯೋಜಿಸಲಾಗುತ್ತಿದೆ. ಕಳೆದ ಭಾನುವಾರ ಬೆಳಿಗ್ಗೆ ನಗರದ ಶಿವಾಜಿ ಉದ್ಯಾನದಲ್ಲಿ ದೌಡ್‌ಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿತ್ತು. ಶ್ವೇತವಸ್ತ್ರ ಧರಿಸಿ, ತಲೆಗೆ ಕೇಸರಿ ಮುಂಡಾಸು ತೊಟ್ಟು, ಸೊಂಟಕ್ಕೆ ಹಳದಿ, ಕೇಸರಿ ಶಾಲು ಕಟ್ಟಿಕೊಂಡು ಓಟದಲ್ಲಿ ಭಾಗಿಯಾಗಿ ಭಕ್ತರು ಗಮನ ಸೆಳೆದಿದ್ದರು.