ಐತಿಹಾಸಿಕೆ ಕೆರೆಗೆ ಚರಂಡಿ ನೀರು ಸೇರ್ಪಡೆ: ಮೀನುಗಳ ಮಾರಣಹೋಮ - etv bharat kannada
ಧಾರವಾಡ:ಕೆರೆಗೆ ನೇರವಾಗಿ ಚರಂಡಿ ನೀರು ಸೇರುತ್ತಿರುವುದರಿಂದ ಧಾರವಾಡದ ಐತಿಹಾಸಿಕ ಕೆಲಗೇರಿ ಕೆರೆಯಲ್ಲಿ ಮೀನುಗಳ ಮಾರಣಹೋಮ ನಡೆದಿದೆ. ವಿಶ್ವೇಶ್ವರಯ್ಯನವರ ವಿನ್ಯಾಸದಲ್ಲಿ ನಿರ್ಮಾಣವಾಗಿರುವ ನೂರು ಎಕರೆ ವಿಸ್ತಾರದ ಐತಿಹಾಸಿಕ ಕೆರೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿವೆ. ಕೆರೆಗೆ ನೇರವಾಗಿ ಚರಂಡಿ ನೀರು ಸೇರುತ್ತಿರುವುದು ಮೀನುಗಳ ಸಾವಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದಾಗಿ ಸತ್ತ ಮೀನುಗಳು ದಡದಲ್ಲಿ ತೇಲಾಡುತ್ತಿವೆ.
ಇಲ್ಲಿ ನಿತ್ಯ ನೂರಾರು ಜನರು ವಾಯುವಿಹಾರಕ್ಕೆ ಬರುತ್ತಾರೆ. ಚರಂಡಿ ನೀರು ಕೆರೆಗೆ ನೀರು ಸೇರುತ್ತಿರುವುದರಿಂದ ಗಬ್ಬು ವಾಸನೆ ಬರುತ್ತಿದ್ದು, ವಾಕಿಂಗ್ ಮಾಡುವುದಕ್ಕೂ ಜನರಿಗೆ ತೊಂದರೆಯಾಗುತ್ತಿದೆ. ಮಹಾನಗರ ಪಾಲಿಕೆ ಮತ್ತು ಕೃಷಿ ವಿಶ್ವವಿದ್ಯಾಲಯದ ನಿರ್ಲಕ್ಷ್ಯದ ಮಧ್ಯೆ ಮೀನುಗಳ ಮಾರಣಹೋಮ ನಡೆದಿದೆ. ಐತಿಹಾಸಿಕ ಕೆರೆ ಪಾಲಿಕೆ ವ್ಯಾಪ್ತಿಗೆ ಬರುತ್ತದೆ. ಆದರೆ ಕೃಷಿ ವಿವಿ ಕೆರೆಯ ನೀರು ಬಳಸುತ್ತಿದೆ. ಈ ಹಿನ್ನೆಲೆಯಲ್ಲಿ ಇಬ್ಬರಿಂದಲೂ ಸರಿಯಾದ ನಿರ್ವಹಣೆ ಆಗುತ್ತಿಲ್ಲಾ, ಇದರಿಂದಾಗಿ ತೊಂದರೆಯಾಗುತ್ತಿದೆ. ಇಷ್ಟು ದಿನ ಕೆರೆಗೆ ಚರಂಡಿ ನೀರು ಸೇರಿರಲಿಲ್ಲಾ. ಆದರೆ ಈಗ ಅವೈಜ್ಞಾನಿಕವಾಗಿ ಅರ್ಧ ಧಾರವಾಡ ನಗರದ ನೀರು ಕೆರೆಗೆ ಸೇರ್ಪಡೆಯಾಗಿದೆ. ಇದರಿಂದ ಕೆರೆಯ ವಾತಾವರಣ ಹದಗೆಟ್ಟು ಹೋಗಿದೆ ಎಂಬುದು ಜನರ ಆರೋಪ.
ಇದನ್ನೂ ಓದಿ:ಉತ್ತರ ಪ್ರದೇಶದ ಕಾಲುವೆಯಲ್ಲಿ 2 ಡಾಲ್ಪಿನ್ ಪತ್ತೆ, ರಕ್ಷಣೆ- ವಿಡಿಯೋ