ಕರ್ನಾಟಕ

karnataka

ETV Bharat / videos

ರಾಜ್‌ಘಾಟ್​​ಗೆ ತೆರಳಿ ರಾಷ್ಟ್ರಪಿತನಿಗೆ ಪುಷ್ಪನಮನ ಸಲ್ಲಿಸಿದ ದ್ರೌಪದಿ ಮುರ್ಮು - ರಾಜ್ ಘಾಟ್​​ಗೆ ದ್ರೌಪದಿ ಮುರ್ಮು ಭೇಟಿ

By

Published : Jul 25, 2022, 9:30 AM IST

Updated : Feb 3, 2023, 8:25 PM IST

ನವದೆಹಲಿ: ದೇಶದ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನ ದ್ರೌಪದಿ ಮುರ್ಮು ಅವರಿಂದು ಬೆಳಗ್ಗೆ ರಾಜ್ ಘಾಟ್​​ಗೆ ಭೇಟಿ ನೀಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಕಳೆದ ಗುರುವಾರ ಮತ ಎಣಿಕೆಯ ಬಳಿಕ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ದೇಶದ 15ನೇ ರಾಷ್ಟ್ರಪತಿ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. 1997ರಲ್ಲಿ ಬಿಜೆಪಿ ಸೇರುವ ಮೂಲಕ ಇವರು ರಾಜಕೀಯ ಕ್ಷೇತ್ರದಲ್ಲಿ ತನ್ನ ಪ್ರಯಾಣ ಪ್ರಾರಂಭಿಸಿದ್ದರು. 2015ರಲ್ಲಿ ಜಾರ್ಖಂಡ್‌ನ ಮೊದಲ ಮಹಿಳಾ ಗವರ್ನರ್ ಆದರು. ಒಡಿಶಾದಿಂದ ರಾಜ್ಯವೊಂದರ ಗವರ್ನರ್ ಆಗಿ ನೇಮಕಗೊಂಡ ಮೊದಲ ಮಹಿಳಾ ಬುಡಕಟ್ಟು ನಾಯಕಿ ಎಂಬ ಹೆಗ್ಗಳಿಕೆಗೂ ಮುರ್ಮು ಪಾತ್ರರಾಗಿದ್ದಾರೆ.
Last Updated : Feb 3, 2023, 8:25 PM IST

ABOUT THE AUTHOR

...view details