ಡ್ರೋನ್ ಕ್ಯಾಮರಾದಲ್ಲಿ ಕುಂದಾನಗರಿ ರಾಜ್ಯೋತ್ಸವ ವೈಭವ ಸೆರೆ: 5 ಲಕ್ಷಕ್ಕೂ ಅಧಿಕ ಮಂದಿ ಭಾಗಿ- ವಿಡಿಯೋ - karnataka Rajyotsava in Belagavi
Published : Nov 2, 2023, 12:15 PM IST
ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವಕ್ಕೆ ಜನಸಾಗರವೇ ಹರಿದು ಬಂದಿತ್ತು. ಸುಮಾರು 5 ಲಕ್ಷಕ್ಕೂ ಅಧಿಕ ಮಂದಿ ಸಂಭ್ರಮಕ್ಕೆ ಸಾಕ್ಷಿಯಾಗಿ ಹೊಸ ಇತಿಹಾಸ ನಿರ್ಮಿಸಿದರು. ಆಕರ್ಷಕ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ :ಕರುನಾಡ ಬಾವುಟ ಹಿಡಿದು ಕನ್ನಡ ಹಾಡು ಹಾಡಿ ಟಿಬೆಟಿಯನ್ನರ ರಾಜ್ಯೋತ್ಸವ ಸಂಭ್ರಮ - ವಿಡಿಯೋ
ಮಂಗಳವಾರ ಮಧ್ಯರಾತ್ರಿಯಿಂದಲೇ ಆರಂಭವಾಗಿದ್ದ ರಾಜ್ಯೋತ್ಸವ ಬುಧವಾರ ರಾತ್ರಿ 10.30 ರ ವರೆಗೂ ನಡೆಯಿತು. ರಾಣಿ ಚನ್ನಮ್ಮ ವೃತ್ತದಲ್ಲಿ ಕಿಕ್ಕಿರಿದು ಸೇರಿದ್ದ ಕನ್ನಡ ಯುವ ಮನಸುಗಳು ಕನ್ನಡ ನಾಡು-ನುಡಿ, ಜಾನಪದ, ಡಿಜೆ ಹಾಡುಗಳಿಗೆ ಹುಚ್ಚೆದ್ದು ಕುಣಿದರು.
ಇಮ್ಮಡಿ ಪುಲಿಕೇಶಿ ಮಹಾರಾಜರು, ವೀರರಾಣಿ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಾಲುಮರದ ತಿಮ್ಮಕ್ಕ ಸೇರಿದಂತೆ ಮತ್ತಿತರ ರೂಪಕಗಳು ಗಮನ ಸೆಳೆದವು. ಮೆರವಣಿಗೆಯುದ್ದಕ್ಕೂ ಕನ್ನಡ ಬಾವುಟ, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ ಅವರ ಭಾವಚಿತ್ರ ಹಿಡಿದು ಜನರು ಸಂಭ್ರಮಿಸಿದರು.
ಇದನ್ನೂ ಓದಿ :ಕುಂದಾನಗರಿಯಲ್ಲಿ ಅದ್ಧೂರಿ ಕರ್ನಾಟಕ ರಾಜ್ಯೋತ್ಸವ : ಯುವ ನಟ ನವೀನ್ ಶಂಕರ್ ಭಾಗಿ