ಟೋಲ್ ಗೇಟ್ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ ಚಾಲಕ: ಸಿಸಿ ಕ್ಯಾಮರಾದಲ್ಲಿ ಭಯಾನಕ ದೃಶ್ಯ ಸೆರೆ - ಟೋಲ್ ಗೇಟ್ನ ಸಿಸಿ ಕ್ಯಾಮರಾ
Published : Nov 22, 2023, 6:29 PM IST
ಡೆಹ್ರಾಡೂನ್ (ಉತ್ತರಾಖಂಡ): ಟೋಲ್ ಗೇಟ್ನಲ್ಲಿ ಸಿಬ್ಬಂದಿಯೊಬ್ಬರ ಮೇಲೆ ಚಾಲಕನೊಬ್ಬ ಕಾರು ಹತ್ತಿಸಿಕೊಂಡು ಹೋದ ಬೆಚ್ಚಿಬೀಳಿಸುವ ಘಟನೆ ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್ನಲ್ಲಿ ನಡೆದಿದೆ. ವೇಗದಲ್ಲಿ ಬಂದ ಚಾಲಕ ಸಿಬ್ಬಂದಿ ಮೇಲೆ ಕಾರು ನುಗ್ಗಿಸಿರುವ ಭಯಾನಕ ದೃಶ್ಯಗಳು ಟೋಲ್ ಗೇಟ್ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇಲ್ಲಿನ ದೋಯಿವಾಲಾ ಬಳಿಯ ಲಾಚಿವಾಲಾ ಟೋಲ್ ಪ್ಲಾಜಾದಲ್ಲಿ ನವೆಂಬರ್ 21 ಮತ್ತು 22ರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಟೋಲ್ ಗೇಟ್ನಲ್ಲಿ ಬಂದ ಕಾರಿಗೆ ನಿಲ್ಲಿಸುವಂತೆ ಟೋಲ್ ಗೇಟ್ ಸಿಬ್ಬಂದಿ ಸೂಚಿಸಿದ್ದಾರೆ. ಆದರೂ, ವೇಗವಾಗಿ ಸಿಬ್ಬಂದಿ ಮೇಲೆಯೇ ಚಾಲಕ ಕಾರನ್ನು ನುಗ್ಗಿಸಿಕೊಂಡು ಹೋಗಿದ್ದಾನೆ. ಇದರಿಂದ ಓರ್ವ ಸಿಬ್ಬಂದಿ ಕಾರಿನ ಕೆಳಗಡೆ ಬಿದ್ದಿದ್ದಾನೆ. ಆಗಲೂ ಕಾರು ನಿಲ್ಲಿಸದೇ ಆತನ ಮೇಲೆ ಕಾರು ಹತ್ತಿಸಿಕೊಂಡು ಆರೋಪಿ ಪರಾರಿಯಾಗಿದ್ದಾನೆ. ಇದರ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.
ಕಾರು ಹರಿದು ಸಿಬ್ಬಂದಿ ಗಾಯಗೊಂಡಿದ್ದಾರೆ. ಆತನನ್ನು ಲಾಚಿವಾಲಾ ನಿವಾಸಿ ಅಜಯ್ ನೇಗಿ ಎಂದು ಗುರುತಿಸಲಾಗಿದೆ. ಸದ್ಯ ಚಿಕಿತ್ಸೆಗಾಗಿ ಹಿಮಾಲಯನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದೆಡೆ, ಈ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ತಕ್ಷಣವೇ ಕಾರ್ಯಪ್ರವೃತರಾದ ಪೊಲೀಸರು ಆರೋಪಿ ಕಾರು ಚಾಲಕನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ವೇಗವಾಗಿ ಬಂದು ಲಾರಿಗೆ ಡಿಕ್ಕಿ ಹೊಡೆದ ಆಟೋ: ಎಂಟು ವಿದ್ಯಾರ್ಥಿಗಳಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ