ಕರ್ನಾಟಕ

karnataka

ಉತ್ತರಾಖಂಡದ ಮೂರು ಪ್ರಸಿದ್ಧ ದೇವಾಲಯಗಳಲ್ಲಿ ಮಹಿಳೆಯರಿಗೆ ಡ್ರೆಸ್​ ಕೋಡ್​ ಜಾರಿ

ETV Bharat / videos

ತುಂಡುಡುಗೆ ಧರಿಸಿ ಬಂದ್ರೆ ನೋ ಎಂಟ್ರಿ.. ದೇವಾಲಯಗಳಲ್ಲಿ ಮಹಿಳೆಯರಿಗೆ ಡ್ರೆಸ್​ ಕೋಡ್​ ಜಾರಿ - ತುಂಡುಡುಗೆ ಧರಿಸಿ ಬಂದ್ರೆ ನೋ ಎಂಟ್ರಿ

By

Published : Jun 3, 2023, 7:31 PM IST

ಹರಿದ್ವಾರ (ಉತ್ತರಾಖಂಡ):ಉತ್ತರಾಖಂಡದ ಮೂರು ಪ್ರಸಿದ್ಧ ದೇವಾಲಯಗಳಲ್ಲಿ ಪಾಶ್ಚಿಮಾತ್ಯ ಉಡುಪುಗಳನ್ನು ನಿಷೇಧಿಸಿ ಮಹಿಳೆಯರು ಮತ್ತು ಬಾಲಕಿಯರಿಗೆ ಡ್ರೆಸ್​ ಕೋಡ್​ ಜಾರಿಗೊಳಿಸಲಾಗಿದೆ. ಹರಿದ್ವಾರದ ಕಂಖಾಲ್​ನಲ್ಲಿರುವ ದಕ್ಷ ಪ್ರಜಾಪತಿ ದೇವಸ್ಥಾನ, ಪೌರಿ ಜಿಲ್ಲೆಯಲ್ಲಿರುವ ನೀಲಕಂಠ ಮಹಾದೇವ ದೇವಸ್ಥಾನ ಮತ್ತು ಡೆಹ್ರಾಡೂನ್​ನಲ್ಲಿರುವ ತಪಕೇಶ್ವರ ಮಹಾದೇವ ದೇವಸ್ಥಾನದಲ್ಲಿ ಅಸಭ್ಯ ಡ್ರೆಸ್​ಗಳನ್ನು ಧರಿಸಿ ಬಂದವರಿಗೆ ದೇವರ ದರ್ಶನವನ್ನು ನಿಷೇಧಿಸಲಾಗಿದೆ.

ಮಹಿಳೆಯರು ಮತ್ತು ಬಾಲಕಿಯರು ದೇವಸ್ಥಾನಕ್ಕೆ ಬರುವವರಾಗಿದ್ದರೆ ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯ ಪ್ರಕಾರ ಬಟ್ಟೆ ಧರಿಸಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ. ಈ ನಿಯಮಗಳನ್ನು ಪಾಲಿಸಿದ್ದಲ್ಲಿ ಮಾತ್ರ ದೇವಾಲಯಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ತಿಳಿಸಿದೆ.

ಈ ಬಗ್ಗೆ ಮಾತನಾಡಿದ ಮಹಾನಿರ್ವಾಣಿ ಅಖಾಡದ ಕಾರ್ಯದರ್ಶಿ ಹಾಗೂ ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಶ್ರೀಮಹಾಂತ ರವೀಂದ್ರ ಪುರಿ, "ದೇವಸ್ಥಾನವು ಮನೋರಂಜನೆಯ ಸ್ಥಳವಲ್ಲ. ದೇವಸ್ಥಾನಕ್ಕೆ ಬರುವ ಮಹಿಳೆಯರು ಮತ್ತು ಬಾಲಕಿಯರು ಕನಿಷ್ಠ 80% ಮೈ ಮುಚ್ಚುವ ಬಟ್ಟೆಗಳನ್ನು ಧರಿಸಿ ಬರಬೇಕು. ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದ ದೇವಾಲಯಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಜಾರಿಯಲ್ಲಿದೆ. ಇಲ್ಲಿಯೂ ಈ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಿದ್ದೇವೆ. ಇದರಿಂದಾಗಿ ದೇವಸ್ಥಾನಕ್ಕೆ ಬರುವ ಇತರೆ ಭಕ್ತರಿಗೆ ಯಾವುದೇ ಮುಜುಗರ ಉಂಟಾಗುವುದಿಲ್ಲ" ಎಂದು ಹೇಳಿದರು.

ಇದನ್ನೂ ಓದಿ:ರಿಲಯನ್ಸ್ ನೇತೃತ್ವದಲ್ಲಿ ಗತವೈಭವ ಮರಳಿ ಪಡೆಯಲಿದೆ 'ಕಾಳಿಘಾಟ್ ದೇವಾಲಯ'

ABOUT THE AUTHOR

...view details