ಕರ್ನಾಟಕ

karnataka

ನಿಯಂತ್ರಣ ತಪ್ಪಿ ಚಿತ್ರದುರ್ಗದ ಹಳ್ಳಿಯೊಂದರಲ್ಲಿ ಅಪ್ಪಳಿಸಿದ ತಪಸ್​

ETV Bharat / videos

DRDO Drone Crashes: ಚಿತ್ರದುರ್ಗದಲ್ಲಿ ಮಾನವ ರಹಿತ ಡ್ರೋನ್ ಮಾದರಿ ವಿಮಾನ 'ತಪಸ್​' ಪತನ - etv bharath kannada news

By

Published : Aug 20, 2023, 5:16 PM IST

ಚಿತ್ರದುರ್ಗ:ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ತಯಾರಿಸಿರುವ ಮಾನವ ರಹಿತ ವಿಮಾನ (ಯುಎವಿ) ಪರೀಕ್ಷೆಯ ವೇಳೆ ನಿಯಂತ್ರಣ ತಪ್ಪಿ ಜಿಲ್ಲೆಯ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಕೃಷಿ ಗದ್ದೆಯಲ್ಲಿ ಅಪ್ಪಳಿಸಿದೆ.  

ಅಧಿಕಾರಿಗಳ ಪ್ರಕಾರ, ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯಿರುವ ಡಿಆರ್​ಡಿಓ ಸಿದ್ಧಪಡಿಸಿದ್ದ (ತಪಸ್) ಡ್ರೋನ್ ಮಾದರಿಯ ವಿಮಾನವು ಪರೀಕ್ಷಾರ್ಥ ಪ್ರಯೋಗದ ವೇಳೆ ನೆಲಕ್ಕೆ ಅಪ್ಪಳಿಸಿದೆ. ಅವಘಡಕ್ಕೆ ನಿರ್ದಿಷ್ಟ ಕಾರಣ ಕಂಡು ಹಿಡಿಯಲು ತನಿಖೆ ನಡೆಸಲು ನೆರವಾಗುವಂತೆ ಘಟನೆಯ ಬಗ್ಗೆ ರಕ್ಷಣಾ ಸಚಿವಾಲಯಕ್ಕೆ ಡಿಆರ್​ಡಿಓ ಮಾಹಿತಿ ನೀಡಿದೆ ಎಂದಿದ್ದಾರೆ.

ಇದನ್ನೂ ಓದಿ:ತಾಂತ್ರಿಕ ದೋಷದಿಂದ ಟೇಕ್​ ಆಫ್​ ಆದ ಮೂರೇ ನಿಮಿಷಕ್ಕೆ ತುರ್ತು ಭೂಸ್ಪರ್ಶ ಮಾಡಿದ ಇಂಡಿಗೋ ವಿಮಾನ : 181 ಪ್ರಯಾಣಿಕರೂ ಸುರಕ್ಷಿತ

ಈ ಘಟನೆಯ ಬಗ್ಗೆ ಸುದ್ದಿ ಹರಡುತ್ತಿದ್ದಂತೆ, ಅಲ್ಲಿನ ಸ್ಥಳೀಯ ಜನರು ರೆಕ್ಕೆಕಳಚಿ ನೆಲಕ್ಕೆ ಬಿದ್ದ ಯುಎವಿ ವಿಮಾನ ಅಪ್ಪಳಿಸಿದ ಸ್ಥಳಕ್ಕೆ ದೌಡಾಯಿಸಿದ್ದಾರೆ. ಇಲ್ಲಿನ ದೃಶ್ಯದಲ್ಲಿ ಯುಎವಿ ವಾಹನದ ಬಿಡಿಭಾಗಗಳು ಅಲ್ಲಲ್ಲಿ ಬಿದ್ದಿರುವುದು ಕಂಡುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. 

ಇದನ್ನೂ ಓದಿ:watch.. ವಿಮಾನದ ಎರಡು ಇಂಧನ ಟ್ಯಾಂಕ್‌ಗಳು ಗದ್ದೆಯಲ್ಲಿ ಪತ್ತೆ.. ಕ್ಷಿಪಣಿ ಎಂದು ಭಾವಿಸಿದ್ದ ಗ್ರಾಮಸ್ಥರು!

ABOUT THE AUTHOR

...view details