ಕರ್ನಾಟಕ

karnataka

ಸಚಿವ ಎಚ್ ಸಿ ಮಹಾದೇವಪ್ಪ

ETV Bharat / videos

Watch...ಬೇಸ್ ಲೆಸ್ ಆರೋಪದ ಪ್ರಶ್ನೆಗಳನ್ನು ಕೇಳಬೇಡಿ: ಸಚಿವ ಎಚ್ ಸಿ ಮಹಾದೇವಪ್ಪ ಅಸಮಾಧಾನ - ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ

By

Published : Jul 22, 2023, 5:45 PM IST


ಮೈಸೂರು: ಜೆಡಿಎಸ್ ಬೆಂಬಲಿಗರು ಎಂಬ ಕಾರಣಕ್ಕೆ, ಇಬ್ಬರು ಹಂಗಾಮಿ ನೌಕರರನ್ನು ಕೆಲಸದಿಂದ ತೆಗೆಯಲಾಗಿದೆ ಎಂಬ ಆರೋಪದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಸಚಿವ ಡಾ. ಎಚ್ ಸಿ. ಮಹಾದೇವಪ್ಪ ಸಿಡಿಮಿಡಿಗೊಂಡರು.  ಈ ರೀತಿ ಬೇಸ್ ಲೆಸ್ ಆರೋಪದ ಪ್ರಶ್ನೆಗಳನ್ನು ಕೇಳಬೇಡಿ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಇಂದು ಮೈಸೂರಿನ ಕಲಾಮಂದಿರದಲ್ಲಿ ನಡೆದ ಪುಸ್ತಕ ಲೋಕಾರ್ಪಣೆ ಸಮಾರಂಭಕ್ಕೆ ಆಗಮಿಸಿದ ವೇಳೆ,  ಮಹಾದೇವಪ್ಪ ಅವರನ್ನು ಮಾಧ್ಯಮದವರು ಪ್ರಶ್ನಿಸಿದ್ದರು.

ಟಿ. ನರಸೀಪುರದಲ್ಲಿ ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಇಬ್ಬರು ಹಂಗಾಮಿ ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ಸಮಾಜ ಕಲ್ಯಾಣ ಸಚಿವ ಡಾ. ಎಚ್ ಸಿ. ಮಹಾದೇವಪ್ಪ ಸಿಡಿಮಿಡಿಗೊಂಡು, ಇದೆಲ್ಲ ಬೇಸ್ ಲೆಸ್ ಆರೋಪ. ಯಾವ್ಯಾವುದೋ ಪ್ರಶ್ನೆಗಳನ್ನು ಕೇಳಬೇಡಿ ನೀವು ಎಂದು ತಮ್ಮ ಅಸಮಾಧಾನ ಹೊರಹಾಕಿದರು. ಅಷ್ಟೇ ಅಲ್ಲ ಪತ್ರಕರ್ತರ ಪ್ರಶ್ನೆಗಳಿಗೆ ಹೆಚ್ಚಿಗೆ ಉತ್ತರವನ್ನು ನೀಡದೇ ಅಲ್ಲಿಂದ ತೆರಳಿದರು.  

ಇದನ್ನೂ ನೋಡಿ:ಪಿಎಸ್ಐ ನೇಮಕಾತಿ ಹಗರಣ ನ್ಯಾಯಾಂಗ ತನಿಖೆಗೆ..ಸರ್ಕಾರದ ಆಲೋಚನೆ ಏನೆಂದು ನನಗೆ ತಿಳಿದಿಲ್ಲ: ಮಾಜಿ ಸಿಎಂ ಬೊಮ್ಮಾಯಿ

ABOUT THE AUTHOR

...view details