ಮೈಸೂರು ದಸರಾ ಉತ್ಸವದಲ್ಲಿ ಶ್ವಾನ ಪ್ರದರ್ಶನ: ವಿಡಿಯೋ - Raitha Dasara
Published : Oct 22, 2023, 3:56 PM IST
ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ರೈತ ದಸರಾ ಉಪಸಮಿತಿಯ ವತಿಯಿಂದ ನಗರದ ಜೆ.ಕೆ.ಮೈದಾನದಲ್ಲಿಂದು ಶ್ವಾನಗಳು ಸೇರಿದಂತೆ ಸಾಕುಪ್ರಾಣಿಗಳ ಪ್ರದರ್ಶನ ಆಯೋಜಿಸಲಾಗಿತ್ತು. ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಪ್ರದರ್ಶನ ಉದ್ಘಾಟಿಸಿದರು. 48 ಜಾತಿಯ 680ಕ್ಕೂ ಅಧಿಕ ಶ್ವಾನಗಳು ಭಾಗಿಯಾಗಿದ್ದವು. ಲ್ಯಾಬ್ರಡಾರ್, ಗೊಲ್ಡನ್ ರಿಟ್ರಿವರ್, ಮುಧೋಳ್, ಸ್ವಿಡ್ಜ್, ಬೀಗಲ್, ಫ್ರೆಂಚ್ ಬುಲ್ ಡಾಗ್, ಜರ್ಮನ್ ಶಫರ್ಡ್, ಸೇಂಟ್ ಬರ್ನಾರ್ಡ್, ಪಮೋರಿಯನ್ ಸೇರಿದಂತೆ ವಿವಿಧ ತಳಿಗಳ ಶ್ವಾನಗಳಿದ್ದವು. ಪ್ರತಿ ತಳಿಗೂ ಪ್ರತ್ಯೇಕ ವಿಭಾಗದ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸಚಿವ ಕೆ.ವೆಂಕಟೇಶ್ ಮಾತನಾಡಿ, "ಸತೀಶ್ ಜಾರಕಿಹೋಳಿ ಅವರಿಗೆ ಸರ್ಕಾರದ ಮೇಲೆ ಅಸಮಾಧಾನವಿಲ್ಲ. ಎಲ್ಲವೂ ಚೆನ್ನಾಗಿದೆ. ಅಸಮಾಧಾನದ ಬಗ್ಗೆ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ನೋಡಿಕೊಳ್ಳುತ್ತಾರೆ" ಎಂದರು.
ಇದೇ ಕಾರ್ಯಕ್ರಮದಲ್ಲಿ ಮೈಸೂರು ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ಮಾತನಾಡಿ, "ಸರ್ಕಾರದಲ್ಲಿ ಯಾವುದೇ ಅಸಮಾಧಾನ ಇಲ್ಲ. ಕೊಟ್ಟಿರುವ ಭರವಸೆಗಳನ್ನು ಸರ್ಕಾರ ಈಡೇರಿಸುತ್ತಿದೆ. ಯಾವುದೇ ಕಾರ್ಯಕ್ರಮಗಳಿಗೂ ಹಣದ ಕೊರತೆ ಇಲ್ಲ" ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ಇದನ್ನೂ ಓದಿ:ಮೈಸೂರು ದಸರಾ ಸಂಭ್ರಮ: ಚಾಮುಂಡಿ ಬೆಟ್ಟದಲ್ಲಿ ದುರ್ಗಾ ನಮಸ್ಕಾರ ಕಾರ್ಯಕ್ರಮ - ವಿಡಿಯೋ