Watch.. ಒಟ್ಟಿಗೆ ಮಲುಗುವ, ಒಂದೇ ತಟ್ಟೆಯಲ್ಲಿ ಆಹಾರ ಸೇವಿಸುವ ಬೆಕ್ಕು- ನಾಯಿ - ಕೋತಿ - ಒಂದೇ ತಟ್ಟೆಯಲ್ಲಿ ಆಹಾರ ಸೇವಿಸುವ ಬೆಕ್ಕು ನಾಯಿ ಕೋತಿ
Published : Sep 4, 2023, 11:01 PM IST
ಅದಿಲಾಬಾದ್( ತೆಲಂಗಾಣ):ಪ್ರಾಣಿ ಸಂಕುಲದಲ್ಲಿ ಕೆಲವೊಂದು ಜಾತಿ ಪ್ರಾಣಿಗಳು ಇತರ ಪ್ರಾಣಿಗಳ ಜೊತೆ ಇರಲು ಅಥವಾ ತಿನ್ನಲು ಬಯಸುವುದಿಲ್ಲ. ಅವುಗಳು ತಮ್ಮ ಜಾತಿಯ ಪ್ರಾಣಿಗಳೊಂದಿಗೆ ಇರಲು ಹೆಚ್ಚಾಗಿ ಬಯಸುತ್ತವೆ. ಅದೇ ರೀತಿಯಾಗಿ ಇಲ್ಲಿ ನಾಯಿ, ಬೆಕ್ಕು ಮತ್ತು ಕೋತಿ ಮೂರು ವಿಭಿನ್ನ ಜಾತಿಯ ಪ್ರಾಣಿಗಳು ಒಟ್ಟಿಗೆ ಇದ್ದು, ತಿನ್ನುವುದು ಮಲಗುವುದು ಕೂಡ ಒಟ್ಟಿಗೆ ಮಾಡುತ್ತವೆ.
ಹೌದು, ಇಲ್ಲಿಯ ಇಂದ್ರವೆಲ್ಲಿ ಮಂಡಲದ ತುಮ್ಮಗುಡದಲ್ಲಿರುವ ಕಿನಕ ಹನುಮಂತರಾವ್ ಎಂಬುವವರ ಅವರ ನಿವಾಸದಲ್ಲಿ ಬೆಕ್ಕು, ಕೋತಿ ಮತ್ತು ನಾಯಿ ಒಟ್ಟಿಗೆ ವಾಸಿಸುತ್ತಿವೆ. ಒಂದೇ ತಟ್ಟೆಯಲ್ಲಿ ಆಹಾರ ಸೇವಿಸುತ್ತವೆ.. ಒಟ್ಟಿಗೆ ಮಲಗುತ್ತವೆ.. ಜೊತೆಗೆ ಆಟವಾಡುತ್ತವೆ. ಹನುಮಂತರಾವ್ ಅವರು ಆರು ತಿಂಗಳಿಂದ ಈ ಮೂರು ವಿಭಿನ್ನ ಜಾತಿಯ ಪ್ರಾಣಿಗಳುನ್ನು ಒಟ್ಟಿಗೆ ಸಾಕುತ್ತಿದ್ದಾರೆ. ಅಲ್ಲದೇ ಈ ಮೂರು ಪ್ರಾಣಿಗಳು ಕೂಡ ಜಗಳವಾಡದೇ ಒಂದಕೊಂದು ಆಸರೆಯಾಗಿ ಸ್ನೇಹಮಯವಾಗಿ ಜೀವಿಸುತ್ತಿವೆ.
ಈ ಬಗ್ಗೆ ಹನುಮಂತರಾವ್ ಅವರು ಮಾತನಾಡಿ, ನಾನು ಆರು ತಿಂಗಳಿನಿಂದ ಈ ಬೆಕ್ಕು ನಾಯಿ ಮತ್ತು ಕೋತಿಗಳನ್ನು ಮನೆಯಲ್ಲಿ ಸಾಕುತ್ತಿದ್ದೇನೆ. ಒಂದನ್ನು ಕಂಡರೆ ಮತ್ತೊಂದು ಜಾತಿಯ ಪ್ರಾಣಿಗೆ ಆಗುವುದಿಲ್ಲ ಅದು ನಮಗೆ ತಿಳಿದಿರುವ ವಿಷಯ. ಆದರೇ ಈ ಮೂರು ಬೇರೆ ಜಾತಿಯ ಪ್ರಾಣಿಗಳಾದರೂ ಈ ಮೂರು ಮನೆಯಲ್ಲಿ ಒಂದು ದಿನ ಜಗಳವಾಡಿದ್ದು ನಾನು ನೋಡಿಲ್ಲ. ಈ ಮೂರು ಒಡಹುಟ್ಟಿದವರಂತೆ ಜೀವಿಸುತ್ತಿವೆ. ಒಟ್ಟಿಗೆ ತಿನ್ನುತ್ತವೆ ಮತ್ತು ಮಲಗುತ್ತವೆ. ಅಲ್ಲದೇ ಒಂದಕೊಂದು ರಕ್ಷಣೆ ಮಾಡಿಕೊಳ್ಳುತ್ತವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಅಯ್ಯೋ ಪಾಪ! ನದಿಗೆ ಹಾರಿ ಬಾರದ ಲೋಕಕ್ಕೆ ತೆರಳಿದ ಯುವತಿ.. ಆಕೆಯ ಚಪ್ಪಲಿ ಬಳಿಯೇ ಕಾದು ಕುಳಿತ ಸಾಕುನಾಯಿ..