ಫುಡ್ ಡೆಲಿವರಿಗೆ ಬಂದ ಜೊಮ್ಯಾಟೊ ಬಾಯ್.. ಯುವಕನ ಖಾಸಗಿ ಅಂಗಕ್ಕೆ ಕಚ್ಚಿತು ಶ್ವಾನ! - ಯುವಕನ ಖಾಸಗಿ ಅಂಗಕ್ಕೆ ಕಚ್ಚಿದ ನಾಯಿ
ಮಹಾರಾಷ್ಟ್ರದ ಪನ್ವೇಲ್ ತಾಲೂಕಿನ ಕಾನ್ ಇಂಡಿಯಾಬುಲ್ಸ್‌ನ ಕಟ್ಟಡವೊಂದರಲ್ಲಿ ಫುಡ್ ಡೆಲಿವೆರಿ ಮಾಡಲು ಬಂದ ಜೊಮ್ಯಾಟೊ ಯುವಕನ ಮೇಲೆ ಸಾಕು ಶ್ವಾನವೊಂದು ದಾಳಿ ಮಾಡಿ ಖಾಸಗಿ ಅಂಗಕ್ಕೆ ಕಚ್ಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶ್ವಾನವೊಂದು ಡೆಲಿವರಿ ಬಾಯ್‌ನ ಖಾಸಗಿ ಅಂಗವನ್ನು ಕಚ್ಚಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಕ್ಕಿರುವ ಮಾಹಿತಿಯ ಪ್ರಕಾರ, ಜೊಮ್ಯಾಟೊ ಡೆಲಿವರಿ ಬಾಯ್ ಆರ್ಡರ್ ಮಾಡಿದ್ದ ಫುಡ್ನ್ನು ತಲುಪಿಸಲು ಕಟ್ಟಡ 11ನೇ ಮಹಡಿಗೆ ಲಿಫ್ಟ್ನಲ್ಲಿ ಹೋಗಿದ್ದರು. ಈ ವೇಳೆ ನಾಯಿ ಆತನ ಮೇಲೆ ದಾಳಿ ಮಾಡಿದ್ದು, ಯುವಕನ ಖಾಸಗಿ ಅಂಗಕ್ಕೆ ಗಾಯವಾಗಿದೆ. ನಾಯಿ ಕಚ್ಚಿದ ಬಳಿಕ ಆ ಯುವಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಶ್ವಾನದ ಮಾಲೀಕರು ಚಿಕಿತ್ಸೆ ಕೊಡಿಸಿದ್ದಾರೆ. ಈ ಘಟನೆ ಆಗಸ್ಟ್ 27ರಂದು ನಡೆದಿದೆ ಎನ್ನಲಾಗ್ತಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಾಯಿಯನ್ನು ಅಜಾಗರೂಕತೆಯಿಂದ ಸಾಕಿರುವ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಶ್ವಾನ ಮಾಲೀಕರಿಗೆ ಶಿಕ್ಷೆಯಾಗಬೇಕು ಎನ್ನುತ್ತಿದ್ದಾರೆ.
Last Updated : Feb 3, 2023, 8:27 PM IST