ಡಿಕೆಶಿಗೆ ನೀರಿನ ಬಗ್ಗೆ ಜ್ಞಾನವಿಲ್ಲ : ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ - ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ
Published : Sep 21, 2023, 6:57 PM IST
ಚಾಮರಾಜನಗರ :ಡಿಸಿಎಂಡಿ ಕೆ ಶಿವಕುಮಾರ್ ಅವರಿಗೆ ಜಲಸಂಪನ್ಮೂಲ ಖಾತೆ ಕೊಡಬಾರದಿತ್ತು ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರಿಗೆ ನೀರಿನ ಬಗ್ಗೆ ಜ್ಞಾನವಿಲ್ಲ. ನೀರು ಬಿಡಬೇಕೆಂದು ಕಾವೇರಿ ನೀರು ನಿಯಂತ್ರಣ ಮಂಡಳಿ ಮತ್ತು ಪ್ರಾಧಿಕಾರ ನಿರ್ದೇಶನ ನೀಡಿದಾಗ ನೀರು ಬಿಡದೇ, ಸರ್ವಪಕ್ಷ ಸಭೆ ಕರೆದು ಒಮ್ಮತದ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಆದರೆ, ಮೊದಲೆಲ್ಲಾ ನೀರು ಹರಿಸಿ ಬಳಿಕ ಸುಪ್ರೀಂ ಕೋರ್ಟ್ ಕದ ತಟ್ಟಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ತನ್ನ ವಾದವನ್ನು ಸಮರ್ಥವಾಗಿ ಮಂಡಿಸದೆ ಇರುವುದರಿಂದ ಪ್ರತಿಬಾರಿಯೂ ಹಿನ್ನಡೆ ಉಂಟಾಗಿದೆ. ಇನ್ನು, ರಾಜ್ಯದಿಂದ ಆಯ್ಕೆಯಾಗಿರುವ ಎಂಪಿಗಳು ಕೂಡ ಪ್ರಧಾನಿ ಬಳಿ ಮಾತನಾಡದೇ ಇರುವುದರಿಂದ ರಾಜ್ಯಕ್ಕೆ ಸಂಕಷ್ಟ ಎದುರಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನೀತಿಗಳಿಂದ ಕಾವೇರಿಗೆ ಸಂಕಷ್ಟ ಉಂಟಾಗಿದೆ. ಬಿಎಸ್ಪಿ ಯಾವಾಗಲೂ ರೈತರ ಪರ, ನಾಡಿನ ಪರ ಧ್ವನಿ ಎತ್ತಲಿದೆ ಎಂದು ಹೇಳಿದರು.
ಇದನ್ನೂ ಓದಿ:ಕಾವೇರಿ ನೀರು ವಿಚಾರದಲ್ಲಿ ಸುಪ್ರೀಂ ವಾಸ್ತವ ಆಧಾರದಲ್ಲಿ ತೀರ್ಪು ನೀಡಬೇಕು: ಬಸವರಾಜ ಬೊಮ್ಮಾಯಿ