ಅದ್ಧೂರಿ ಹನುಮಮಾಲಾ ವಿರಮಣ: ಅಂಜನಾದ್ರಿಯಲ್ಲಿ ಭಕ್ತಸಾಗರ
Published : Dec 24, 2023, 10:06 AM IST
ಕೊಪ್ಪಳ : ಹನುಮನುದಿಸಿದ ನಾಡು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಹನುಮಧ್ವ್ರತ ಆಚರಣೆ ಹಿನ್ನೆಲೆ ಭಾರಿ ಸಂಖ್ಯೆಯಲ್ಲಿ ಹನುಮ ಭಕ್ತರು ಆಗಮಿಸಿದ್ದಾರೆ. ಅಂಜನಿಸುತನ ದರ್ಶನ ಪಡೆದ ಭಕ್ತರು ಮಾಲೆ ವಿಸರ್ಜಿಸುವ ಕಾರ್ಯ ನಡೆದಿದೆ. ಈ ಕುರಿತು 'ಈಟಿವಿ ಭಾರತ'ದ ಪ್ರತ್ಯಕ್ಷ ವರದಿ ಇಲ್ಲಿದೆ.
'ಅಂಜನಾದ್ರಿಯಲ್ಲಿ ನಾವು ಮಾಡಿಕೊಂಡ ಸಂಕಲ್ಪಗಳೆಲ್ಲ ನೆರವೇರಿದೆ. ಜಿಲ್ಲಾಡಳಿತ ಮತ್ತು ಪ್ರವಾಸದ್ಯೋಮದಿಂದ ಭಕ್ತರಿಗೆ ಎಲ್ಲ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ನಿನ್ನೆ ರಾತ್ರಿಯೇ ದೇವರ ದರ್ಶನಕ್ಕೆಂದು ಬಂದಿದ್ದೇವೆ. ಕೆಲ ಪ್ರವಾಸಿಗರು ಮತ್ತು ಸ್ಥಳೀಯರು ಕಾಲಿಗೆ ಚಪ್ಪಲಿ ಧರಿಸಿ ಬೆಟ್ಟದ ಮೇಲೆ ಬರುತ್ತಾರೆ. ಇದನ್ನು ದಯವಿಟ್ಟು ನಿಷೇಧಿಸಬೇಕೆಂದು ಮನವಿ ಮಾಡುತ್ತೇವೆ' ಎಂದು ಭಕ್ತರೊಬ್ಬರು ತಿಳಿಸಿದರು.
ಇಂದು ನಡೆಯುತ್ತಿರುವ ಹನುಮಮಾಲೆ ವಿಸರ್ಜನೆಗೆ ರಾಜ್ಯದ ವಿವಿಧ ಕಡೆಗಳಿಂದ ಲಕ್ಷಾಂತರ ಭಕ್ತರು ಅಂಜನಾದ್ರಿಗೆ ಆಗಮಿಸುವ ನಿರೀಕ್ಷೆಯಿದೆ. ಜಿಲ್ಲಾಡಳಿತವು ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ, ಊಟ, ವಸತಿ, ಶೌಚಾಲಯದಂತಹ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದೆ. ಭಕ್ತರು ತಮ್ಮ ಮೊಬೈಲ್ನಲ್ಲಿ ಕ್ಯೂರ್ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಂಜನಾದ್ರಿಯಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ :ಅಂಜನಾದ್ರಿ ಬೆಟ್ಟದಲ್ಲಿ ನಾಳೆ ನಡೆಯುವ ಹನುಮಮಾಲೆ ವಿಸರ್ಜನೆಗೆ ಕೊನೆಯ ಕ್ಷಣದ ಸಿದ್ಧತೆ