ಕರ್ನಾಟಕ

karnataka

ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್

ETV Bharat / videos

ಸಂಸದೆ ಸುಮಲತಾ ಜೊತೆ ಗುರುತಿಸಿಕೊಂಡರೆ ಕೈ ಕಾರ್ಯಕರ್ತರ ವಿರುದ್ಧ ಶಿಸ್ತು ಕ್ರಮ: ಸಿ ಡಿ ಗಂಗಾಧರ್ - ETV Bharat kannada News

By

Published : Feb 5, 2023, 3:09 PM IST

Updated : Feb 6, 2023, 4:07 PM IST

ಮಂಡ್ಯ :ಸಂಸದೆ ಸುಮಲತಾ ಅಂಬರೀಶ್ ಅವರ ಜೊತೆ ಕಾಂಗ್ರೆಸ್ ಕಾರ್ಯಕರ್ತರು ಗುರುತಿಸಿಕೊಂಡು ಸಭೆ ಸಮಾರಂಭಗಳಲ್ಲಿ ಭಾಗಿಯಾದರೆ, ಅಂತಹವರ ವಿರುದ್ಧ ಪಕ್ಷದಿಂದ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ ಡಿ ಗಂಗಾಧರ್ ತಿಳಿಸಿದರು. ಮಂಡ್ಯದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ಮಂಡ್ಯ ಕರ್ನಾಟಕದ ಸಂಘದಲ್ಲಿ ಸುಮಲತಾ ಅವರ ಬೆಂಬಲಿಗರು ನಡೆಸಿದ ಸಭೆಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಆಹ್ವಾನಿಸಿರುವುದು ಸರಿಯಾದ ಕ್ರಮವಲ್ಲ. ಇನ್ಮುಂದೆ ಸಂಸದೆ ಸುಮಲತಾ ಜೊತೆ ಗುರುತಿಸಿಕೊಳ್ಳಬೇಡಿ ಎಂದು ಕಾರ್ಯಕರ್ತರಿಗೆ ಹೇಳಿದರು. ಸುಮಲತಾ ಬೆಂಬಲಿಗರು ನಡೆಸುವ ಸಭೆಗಳಿಗೂ ಹೋಗಬೇಡಿ. ಸಂಸದೆ ಬೆಂಬಲಿಗರು‌‌ ಕಾಂಗ್ರೆಸ್ಸಿಗರನ್ನು ಕರೆಯಲುಬೇಡಿ ಎಂದು ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ.  

ಸುಮಲತಾ ಹಾಗೂ ಆಪ್ತರ ಜೊತೆ ಗುರುತಿಸಿಕೊಳ್ಳದಂತೆ ಖಡಕ್ ವಾರ್ನಿಂಗ್ ಕೊಟ್ಟ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ ಡಿ ಗಂಗಾಧರ್, ಕೆಲ ಮುಖಂಡರ ಡಬಲ್ ಸ್ಟ್ಯಾಂಡರ್ಡ್ ನಡೆಗೆ ರಾಜ್ಯ ನಾಯಕರ ಬೇಸರ ವ್ಯಕ್ತಪಡಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ಬಳಿಕವು ಸುಮಲತಾ ಬೆಂಬಲಿಗರ ಪಡೆ ಜೊತೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಮುಜುಗರವಾಗುತ್ತಿದ್ದು, ಈ ಮುಜುಗರದಿಂದ ತಪ್ಪಿಸಿಕೊಳ್ಳಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಟ್ಟಪ್ಪಣೆ ಹೊರಡಿಸಿದ್ದಾರೆ. 

ಸುಮಲತಾರ ರಾಜಕೀಯ ತೀರ್ಮಾನಗಳಿಗೆ ನಮ್ಮ ಅಭಿಪ್ರಾಯವಿಲ್ಲ. ಎಂಪಿ ಚುನಾವಣೆ ಬಳಿಕ ನಡೆದ ಎಲ್ಲ ಚುನಾವಣೆಗಳಲ್ಲಿ‌ ಸುಮಲತಾ ತಟಸ್ಥವಾಗಿದ್ದರು. ಕಾಂಗ್ರೆಸ್ ಆ ಎಲ್ಲ ಚುನಾವಣೆಗಳಲ್ಲಿ ಹೋರಾಟ ಮಾಡಿದೆ. ಆದ್ದರಿಂದ ಅವರ ಸಭೆಗಳಿಗೆ ಹೋಗುವುದು ಸಮಂಜಸವಲ್ಲ, ಅದರ ಅವಶ್ಯಕತೆಯೂ ಇಲ್ಲ. ಸೂಚನೆ ಮೀರಿ ಹೋದರೆ ಮುಂದೆ ನಾಯಕರ ಗಮನಕ್ಕೆ ತಂದು ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.  

ಇದನ್ನೂ ಓದಿ :ರಾಜ್ಯ ರಾಜಕಾರಣಕ್ಕೆ ಸುಮಲತಾ ಎಂಟ್ರಿಯಾಗಲಿದ್ದಾರಾ?.. ಸಂಸದೆ ಬೆಂಬಲಿಗರ ಸಭೆಯಲ್ಲಿ ಮಹತ್ವದ ನಿರ್ಧಾರ

Last Updated : Feb 6, 2023, 4:07 PM IST

ABOUT THE AUTHOR

...view details