ವಿಶ್ವಕಪ್ ಫೈನಲ್ ಪಂದ್ಯ: ಮಣ್ಣಿನಲ್ಲಿ ಕಲಾಕೃತಿ ರಚಿಸಿ ಶುಭ ಹಾರೈಸಿದ ಧಾರವಾಡದ ಕಲಾವಿದ
Published : Nov 18, 2023, 12:57 PM IST
ಧಾರವಾಡ :ಭಾರತ ಮತ್ತು ಆಸ್ಟ್ರೇಲಿಯಾ ತಂಡದ ನಡುವೆ ನಾಳೆ (ನ.19) ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಕಲಾವಿದರೊಬ್ಬರು ಮಣ್ಣಿನಲ್ಲಿ ವಿಶ್ವಕಪ್ ಮಾದರಿ ತಯಾರಿಸಿ ಟೀಂ ಇಂಡಿಯಾಕ್ಕೆ ಶುಭ ಕೋರಿದ್ದಾರೆ. ಧಾರವಾಡದ ಕೆಲಗೇರಿಯ ಗಾಯತ್ರಿಪುರ ಕಲಾವಿದ ಮಂಜುನಾಥ ಹಿರೇಮಠ ಅವರು ಭಾರತ ತಂಡಕ್ಕೆ ವಿಭಿನ್ನವಾಗಿ ಶುಭ ಹಾರೈಸಿದ್ದಾರೆ.
ಸುಮಾರು ಮೂರು ಗಂಟೆಗಳ ಕಾಲ ವಿಶ್ವಕಪ್ 23 ನಡೆಯುತ್ತಿರುವುದರಿಂದ 23 ಸೆಂಟಿಮೀಟರ್ ಎತ್ತರದ ಮಣ್ಣಿನ ಕಲಾಕೃತಿ ರಚನೆ ಮಾಡುವ ಮೂಲಕ ನಮ್ಮ ತಂಡ, ನಮ್ಮ ಹೆಮ್ಮೆ, ಗೆದ್ದು ಬಾ ಭಾರತ ಎಂದು ಶುಭ ಹಾರೈಸಿದ್ದಾರೆ. ಜೊತೆಗೆ, ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಜಯ ಗಳಿಸಲಿ ಎಂದು ಸಾವಿರಾರು ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.
ಭಾನುವಾರ ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಇದನ್ನೂ ಓದಿ :ವಿಶ್ವಕಪ್ 2023ರ ಫೈನಲ್ ಪಂದ್ಯ : ಆಸ್ಟ್ರೇಲಿಯಾ ಮಣಿಸಲು ಸಜ್ಜಾದ ರೋಹಿತ್ ಶರ್ಮಾ ಅಂಡ್ ಟೀಂ